Log In
BREAKING NEWS >
ಶಿರೂರು ಶ್ರೀ ಅಸಹಜ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್; ಓರ್ವ ಮಹಿಳೆ ಪೊಲೀಸ್ ವಶಕ್ಕೆ... ನಿತ್ಯ ಆಶ್ರಮಕ್ಕೆ ಆಗಮಿಸಿ ಲಕ್ಷ್ಮೀವರ ತೀರ್ಥ ಸ್ವಾಮೀಜಿಗೆ ಫಲಾಹಾರ ನೀಡುತ್ತಿದ್ದ ಮಹಿಳೆ...ಅಷ್ಟ ಮಠಗಳಲ್ಲಿ ಸೆಕ್ಸ್ ಹಿಂದೆಯೂ ಇತ್ತು, ಮುಂದೆ ಕೂಡ ಇರುತ್ತದೆ: ಶಿರೂರು ಶ್ರೀ ಆಡಿಯೋ ವೈರಲ್

ಸುಕ್ರಿ ಬೊಮ್ಮಗೌಡ, ಸಾಕ್ಷಿ ಮಲಿಕ್ ಸೇರಿ ಐವರಿಗೆ ಚುಂಚಶ್ರೀ ಪ್ರಶಸ್ತಿಯ ಗರಿ

ಮಂಡ್ಯ:  ಆದಿಚುಂಚನಗಿರಿ ಮಠದ ವತಿಯಿಂದ ನೀಡಲಾಗುವ 2017ನೇ ಸಾಲಿನ ಚುಂಚಶ್ರೀ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತರಾದ ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡ, ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲ್ಲಿಕ್ ಸೇರಿ ಐವರು ಗಣ್ಯರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರಿನ ಪದ್ಮಶ್ರೀ ಡಾ.ಮಾಲತಿ ಹೊಳ್ಳ, ಸಾಹಿತ್ಯ ಕ್ಷೇತ್ರದಿಂದ ತುಮಕೂರಿನ ಡಾ.ಡಿ.ಕೆ.ರಾಜೇಂದ್ರ, ಬೆಂಗಳೂರಿನ ಪ್ರೊ. ಶಿವರಾಮ್ ಅಗ್ನಿಹೋತ್ರಿಯವರನ್ನು ಚುಂಚಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಭಾನುವಾರ ಆದಿಚುಂಚನಗಿರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮಿಗಳು ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಶಸ್ತಿಯು ತಲಾ 50ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

No Comments

Leave A Comment