Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಲಂಡನ್ ಮೆಟ್ರೋ ಸ್ಫೋಟ ಪ್ರಕರಣ: 18 ವರ್ಷದ ಯುವಕನ ಬಂಧನ

ಲಂಡನ್: ಲಂಡನ್ ನ ಅಂಡರ್‏ಗ್ರೌಂಡ್ ಮೆಟ್ರೊ ನಿಲ್ದಾಣದಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 18 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಕೆಂಟ್ ಪೊಲೀಸರು ಯುವಕನನ್ನು ತನಿಖೆಗಾಗಿ ವಶಕ್ಕೆ ಪಡೆದಿದ್ದು, ಭಯೋತ್ಪಾದಕ ಕಾಯ್ದೆಯ ಸೆಕ್ಷನ್ 41 ರ ಅಡಿಯಲ್ಲಿ ಬಂಧಿಸಿದ್ದು ದಕ್ಷಿಣ ಲಂಡನ್ ಪೊಲೀಸ್ ಠಾಣೆಗೆ ಕಳಿಸಲಾಗುತ್ತದೆ. ಬಂಧನದ ಬಗ್ಗೆ ಅಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಇದು ಮಹತ್ವದ ಬೆಳವಣಿಗೆ ಎಂದು ಹೇಳಿದ್ದಾರೆ.

ಪೊಲೀಸ್ ಅಧಿಕಾರಿಗಳಷ್ಟೇ ಸಾರ್ವಜನಿಕರೂ ಸಹ ಎಚ್ಚರದಿಂದ ಇರಬೇಕು ಎಂದು ಪೊಲೀಸ್ ಅಧಿಕಾರಿ ಕರೆ ನೀಡಿದ್ದಾರೆ.

No Comments

Leave A Comment