Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಮಾಚಿಲ್‌ನಲ್ಲಿ ಇಬ್ಬರು ನುಸುಳುಕೋರ ಉಗ್ರರ ಹತ್ಯೆಗೈದ ಯೋಧರು

ಶ್ರೀನಗರ : ಉತ್ತರ ಕಾಶ್ಮೀರದ ಕುಪ್‌ವಾರಾ ಜಿಲ್ಲೆಯ ಮಾಚಿಲ್‌ ವಲಯಲ್ಲಿನ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದೊಳಗೆ ನುಸುಳಿ ಬರಲು ಯತ್ನಿಸಿದ ಇಬ್ಬರು ಉಗ್ರರನ್ನು ಭಾರತೀಯ ಭದ್ರತಾ ಪಡೆಗಳು ಹೊಡೆದುರುಳಿಸಿರುವುದಾಗಿ ಶ್ರೀನಗರದಲ್ಲಿನ ರಕ್ಷಣಾ ಅಧಿಕಾರಿ ತಿಳಿಸಿದ್ದಾರೆ.

ಭಾರತೀಯ ಸೈನಿಕರು ಮಾಚಿಲ್‌ ವಲಯದ ಎಲ್‌ಓಸಿಯಲ್ಲಿ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿ ನುಸುಳುಕೋರರನ್ನು ತಡೆದಾಗ ಅವರು ಗುಂಡಿನ ಕಾಳಗಕ್ಕೆ ಮುಂದಾದರು. ಕೂಡಲೇ ಭಾರತೀಯ ಯೋಧರು ಗುಂಡಿನ ಪ್ರತಿದಾಳಿ ನಡೆಸಿ ಇಬ್ಬರು ನುಸುಳುಕೋರ ಉಗ್ರರನ್ನು ಹತ್ಯೆಗೈದರು ಎಂಧು ರಕ್ಷಣಾ ವಕ್ತಾರ ಕರ್ನಲ್‌ ರಾಜೇವ್‌ ಕಾಲಿಯಾ ತಿಳಿಸಿದರು.

ಹತ ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಲಿಯಾ ಹೇಳಿದರು.

No Comments

Leave A Comment