Log In
BREAKING NEWS >
ಕೊಪ್ಪಳದಲ್ಲಿ ಮುಂಜಾನೆ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ....

ಸಿಡಿದೆದ್ದ ಅನುಪಮಾ ಶೆಣೈ;ಸಿಎಂ ವಿರುದ್ದ CBI ತನಿಖೆಯಾಗಲಿ

ಉಡುಪಿ: ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರು ಮತ್ತೆ ಹೋರಾಟಕ್ಕೆ ಸಿದ್ದವಾಗಿದ್ದು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ, ಜೋಗ ಜಲಪಾತ ವ್ಯಪಾರೀಕರಣ ಮಾಡುತ್ತಿರುವುದು,ಉಡುಪಿಯ ಹಾಜಿ ಅಬ್ದುಲ್ಲಾ ಸರ್ಕಾರಿ  ಆಸ್ಪತ್ರೆ ಖಾಸಗೀಕರಣ ಮಾಡುತ್ತಿರುವುದು ಬಹುದೊಡ್ಡ ಭ್ರಷ್ಟಾಚಾರಗಳು. ಈ ಬಗ್ಗೆ ಸಿಬಿಐ ತನಿಖೆಗೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ. ಸಿಬಿಐ ತನಿಖೆ ನಡೆಸದಿದ್ದರೆ ಖಾಸಗಿ ದೂರು ಸಲ್ಲಿಸಿ ನ್ಯಾಯಾಂಗ ಹೋರಾಟ ಮಾಡುತ್ತೇನೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಆರ್‌.ವಿ.ದೇಶಪಾಂಡೆ, ಪ್ರಮೋದ್‌ ಮಧ್ವರಾಜ್ , ಮಹದೇವ ಪ್ರಸಾದ್ ,ಐಎಎಸ್ ಅಧಿಕಾರಿ ದಂಪತಿಗಳಾದ ಶಾಲಿನಿ ರಜನೀಶ್, ರಜನೀಶ್ ಗೋಯಲ್ ಮೇಲೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲು ಈ ವೇಳೆ ಆಗ್ರಹಿಸಿದರು.

No Comments

Leave A Comment