Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಪ್ರೀತಿ ಅಮರ; ಶ್ರೀಸಾಮಾನ್ಯ ಪ್ರೇಮಿಗಾಗಿ ರಾಜಕುಮಾರಿ ಪಟ್ಟ ತೊರೆದ ಮಾಕೋ

ಟೋಕಿಯೋ: ಈಕೆ ಜಪಾನ್ ಚಕ್ರವರ್ತಿ ಅಕಿಹಿಟೋ ಅವರ ಮೊಮ್ಮಗಳು, ರಾಜಕುಮಾರಿ ಮಾಕೋ, ವಯಸ್ಸು 25, ತಾನು ಪ್ರೀತಿಸಿದ ತನ್ನ ಮಾಜಿ ಸಹಪಾಠಿ, ಜನಸಾಮಾನ್ಯ ಯುವಕ ಕಿ.ಕೊಮುರೋನನ್ನು ಮದುವೆಯಾಗುವ ಹಿನ್ನೆಲೆಯಲ್ಲಿ ರಾಜಕುಮಾರಿ ಪಟ್ಟವನ್ನೇ ತ್ಯಜಿಸಿದ್ದಾಳೆ.

ಜಪಾನ್ ಅರೆಸೊತ್ತಿಗೆ ಕಾನೂನಿನ ಪ್ರಕಾರ, ರಾಜಮನೆತನ ಹೊರತುಪಡಿಸಿ, ಬೇರೆ ಯಾರನ್ನೇ ವಿವಾಹವಾಗುವುದಾದರೆ  ಅರೆಸೊತ್ತಿಗೆಯ ರಾಜಕುಮಾರಿ ಪಟ್ಟ ಮತ್ತು ರಾಜಮನೆತನದ ಸೌಲಭ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ.

ಆ ನಿಟ್ಟಿನಲ್ಲಿ ರಾಜನ ಅನುಮತಿ ಪಡೆದ ಬಳಿಕ ಜಪಾನ್ ರಾಜಕುಮಾರಿ ಮಾಕೋ ರಾಜಮನೆತನಯೇತರ ವ್ಯಕ್ತಿಯ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ರಾಜ ಫ್ಯೂಮಿಹಿಟೋ(ಅಕಿಶಿನೋ) ಮತ್ತು ಕಿಕೋ ದಂಪತಿ ಪುತ್ರಿಯಾಗಿದ್ದಾಳೆ ಮಾಕೋ.

ಇಬ್ಬರು ಟೋಕಿಯೋದ ಕ್ರಿಶ್ಚಿಯನ್ ಲಾ ಯೂನಿರ್ವಸಿಟಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದ ಸಂದರ್ಭದಲ್ಲಿ ಪರಿಚಯವಾಗಿದ್ದು, ಬಳಿಕ ಒಬ್ಬರನ್ನೊಬ್ಬರು ಪ್ರೀತಿಸತೊಡಗಿದ್ದರು. ಸೂರ್ಯನ ನಗುವಿನಂತಿರುವ ಕಿ ಕೋಮುರೋನ ಪ್ರೀತಿಯ ಬಲೆಗೆ ಬಿದ್ದಿರುವುದಾಗಿ ಮಾಕೋ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ.

ಜನಸಾಮಾನ್ಯನನ್ನು ಮದುವೆಯಾದರೆ ನನ್ನ ರಾಜಮನೆತನದ ಪಟ್ಟ ಕಳೆದುಕೊಳ್ಳಬೇಕಾಗುತ್ತದೆ ಎಂದು ಚಿಕ್ಕಂದಿನಿಂದಲೇ ಗೊತ್ತಿತ್ತು. ನಾನು ರಾಜಮನೆತನದವಳಾಗಿ, ರಾಜಕುಮಾರಿಯಾಗಿ ಎಷ್ಟು ಕಾರ್ಯನಿರ್ವಹಿಸಲು ಸಾಧ್ಯವೋ ಅಷ್ಟು ಮಾಡಿದ್ದೇನೆ. ಇನ್ನು ನನ್ನ ವೈಯಕ್ತಿಕ ಬದುಕಿನ ಬಗ್ಗೆ ಗಮನ ಕೊಡಬೇಕಾಗಿದೆ ಎಂದು ಮಾಕೋ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ರಾಜಕುಮಾರಿ ಪಟ್ಟ ತ್ಯಜಿಸಲು ನಿರ್ಧರಿಸಿದ ಮಾಕೋ ಭಾನುವಾರ ನಿಶ್ಚಿತಾರ್ಥವನ್ನು ಘೋಷಿಸಿದ್ದಾರೆ. ಮಾಕೋ ಹಾಗೂ ಕೋಮುರೋ ವಿವಾಹ ಮುಂದಿನ ವರ್ಷ ನಡೆಯುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

No Comments

Leave A Comment