Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಲಕ್ನೋ ಕೋರ್ಟ್‌ ಕಟ್ಟಡದ ಲಿಫ್ಟ್ ಕುಸಿದು 8 ಮಂದಿಗೆ ಗಾಯ

ಲಕ್ನೋ : ಇಲ್ಲಿನ ಜಿಲ್ಲಾ ನ್ಯಾಯಾಲಯದ ಕಟ್ಟಡದಲ್ಲಿನ ಲಿಫ್ಟ್ ಇಂದು ಸೋಮವಾರ ಮಧ್ಯಾಹ್ನ  ನಾಲ್ಕನೇ ಮಹಡಿಯಿಂದ ನೆಲ ಅಂತಸ್ತಿಗೆ ಕುಸಿದು ಬಿದ್ದ ಪರಿಣಾಮವಾಗಿ ಎಂಟು ಮಂದಿ ಗಾಯಗೊಂಡರು.

ಅವಘಡ ಸಂಭವಿಸಿದ ವೇಳೆ ಲಿಫ್ಟಿನೊಳಗೆ ಆರು ಮಂದಿ ವಕೀಲರು ಮತ್ತು ಇಬ್ಬರು ನ್ಯಾಯಾಲಯ ಸಿಬಂದಿಗಳು ಇದ್ದರು.

ತಾಂತ್ರಿಕ ತೊಂದರೆಗೆ ಗುರಿಯಾದ ಲಿಫ್ಟ್ ನಾಲ್ಕನೇ ಮಹಡಿಯಲ್ಲಿದ್ದಾಗ ಇದ್ದಕ್ಕಿದ್ದಂತೆಯೇ ನೆಲ ಅಂತಸ್ತಿಗೆ ಕುಸಿಯಿತು. ಒಡನೆಯೇ ಗಾಯಾಳುಗಳನ್ನು ಬಲರಾಮಪುರ ಆಸ್ಪತ್ರೆಗೆ ಸೇರಿಸಲಾಯಿತು. ಗಾಯಾಳುಗಳ ಪೈಕಿ ಒಬ್ಬರಿಗೆ ಕಾಲು-ಮುರಿತ ಉಂಟಾಗಿದೆ.

ಅವಘಡ ಸಂಭವಿಸಿದೊಡನೆಯೇ ಜಿಲ್ಲಾ ನ್ಯಾಯಾಧೀಶ ಆರ್‌ ಕೆ ಉಪಾಧ್ಯಾಯ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕೌಶಲ್‌ ರಾಜ್‌ ಶರ್ಮಾ ಸ್ಥಳಕ್ಕೆ ಧಾವಿಸಿ ಘಟನೆಯ ತನಿಖೆಗೆ ಆದೇಶಿಸಿದರು.

No Comments

Leave A Comment