Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೇತ್ರಾವತಿಯಲ್ಲಿ ನೀರುಪಾಲು

ಮಂಗಳೂರು: ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಕೊಣಾಜೆ ಇನ್ನೋಳಿಯ ನಡುಗುಡ್ಡೆಯಲ್ಲಿ ನಡೆದಿದೆ.

ಇವರು ವಳಚ್ಚಿಲ್ ನಲ್ಲಿರುವ ಶ್ರೀನಿವಾಸ ಎಂಜಿನಿಯರಿಂಗ್ ಕಾಲೇಜಿನವರಾಗಿದ್ದು  8 ವಿದ್ಯಾರ್ಥಿಗಳು ನದಿಯಲ್ಲಿ ಈಜಲು ತೆರಳಿದ್ದರು, ಈ ಸಂದರ್ಭದಲ್ಲಿ ವಿಶಾಲ್(21), ಶುಭಂ(22), ಶ್ರೀರಾಮ್(21)  ಎನ್ನುವ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಉಳಿದ 5 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.

ಕೊಣಾಜೆ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ತನಿಖೆ ಮುಂದುವರಿದಿದೆ.

No Comments

Leave A Comment