Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಉಳ್ಳಾಲ: ಮನೆ ಮೇಲೆ 15 ರೌಡಿಗಳ ದಾಳಿ,ದಾಂಧಲೆ

ಮಂಗಳೂರು : ಉಳ್ಳಾಲ ದರ್ಗಾ ಬಳಿಯ ಮನೆ ಮೇಲೆ ರೌಡಿಗಳನ್ನೊಳಗೊಂಡ 15 ಜನರ ತಂಡ ಶನಿವಾರ  ರಾತ್ರಿ 11.30 ರ ಸುಮಾರಿಗೆ ದಾಳಿ ನಡೆಸಿ ಮನೆ ಮಂದಿಗೆ ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಮನೆ ಮಾಲೀಕ ಖಾಸಿಮ್, ಆತನ ಪತ್ನಿ ಮೈಮುನಾ ಮಕ್ಕಳಾದ ಸೋಯಲ್, ಅಮಿನ್ ಮೇಲೆ  ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ.

ಖಾಸಿಮ್ ರ  ಇನ್ನೋರ್ವ ಮಗ ಹಂಝ ನನ್ನು ಕೊಲೆ ಮಾಡಲು ಬಂದಿದ್ದಾಗಿ  ಹಲ್ಲೆಕೋಂಡಿದ್ದಾರೆ. ಹಂಝ ಮನೆಯಲ್ಲಿ ಇಲ್ಲದ ಕಾರಣ ಮನೆಯಲ್ಲಿದ್ದವ ಮೇಲೆ ಹಲ್ಲೆ ನಡೆಸಿ ಬೆದರಿಸಿದ್ದು,
ಆತ ಎಲ್ಲಿದ್ದಾನೆ ಎಂದು ಹೇಳಿ ಎಂದು  ಹಲ್ಲೆ ನಡೆಸಿ ಮನೆಯ ಕಿಟಕಿ, ಬಾಗಿಲುಗಳನ್ನು ಪುಡಿಗೈದು ಪರಾರಿಯಾಗಿದ್ದಾರೆ.

ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ ನೀಡಲಾಗುತ್ತಿದೆ.

ಹಂಝ ಕೆಲ ದಿನಗಳ ಹಿಂದೆ ಒಂದು ಗುಂಪಿನೊಂದಿಗೆ ಜಗಳವಾಡಿಕೊಂಡಿದ್ದ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

No Comments

Leave A Comment