Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಜಮ್ಮು ಕಾಶ್ಮೀರ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಸೋಪೋರ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್‌ ಸಾಗಿದ್ದು  ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆ.

ಆರಂಭಿಕ ಮಾಹಿ ತಿಗಳ ಪ್ರಕಾರ ಹತ ಉಗ್ರರು ಹಿಜ್‌ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ.  ಇವರ ಕೈಯಲ್ಲಿದ್ದ ಎಕೆ 47 ರೈಫ‌ಲ್‌ಗ‌ಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಈ ಉಗ್ರರ ಗುರುತು ಇನ್ನೂ ದೃಢಪಟ್ಟಿಲ್ಲ.

ಸೋಪೋರ್‌ನಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಗುಪ್ತಚರ ಮಾಹಿತಿಯನ್ನು  ಪಡೆದ ಪ್ರಕಾರ ಭದ್ರತಾ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಇಡಿಯ ಪ್ರದೇಶವನ್ನು ಸುತ್ತು ವರಿದು ಶೋಧ ಕಾರ್ಯಾಚರಣೆ ಕೈಗೊಂಡವು.

ಭಾರತದ ಗಡಿಯೊಳಗೆ ಉಗ್ರರನ್ನು ನುಸುಳಿಸುವ ತನ್ನ ಯತ್ನದ ಅಂಗವಾಗಿ ಪಾಕ್‌ ಸೇನೆ ನಿನ್ನೆ ಭಾನುವಾರ ಜಮ್ಮು ಕಾಶ್ಮೀರದ ಕುಪ್‌ವಾರಾ ಜಿಲ್ಲೆಯ ಆಮ್‌ರೋದಿನ್‌, ಚತ್‌ಕಾಡಿ ಮತ್ತು ಶಾದಿಪುರ ಪ್ರದೇಶಗಳ ಮೇಲೆ ಅಪ್ರಚೋದಿತವಾಗಿ ಭಾರೀ ಗುಂಡಿನ ದಾಳಿ ನಡೆಸಿದ್ದವು.

No Comments

Leave A Comment