Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೆ.27ರಿ೦ದ ಮೊದಲ್ಗೊ೦ಡು ಅಕ್ಟೋಬರ್ 2 ರವರೆಗೆ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ ಜರಗಲಿದೆ ಎ೦ದು ಶ್ರೀಶಾರದಾ ಮಹೋತ್ಸವ ಸಮಿತಿಯ ಪ್ರಕಟಣೆ ತಿಳಿಸಿದೆ.....

ಬ್ರಿಕ್ಸ್ ನಲ್ಲಿ ಪಾಕ್ ಗೆ ಮುಖಭಂಗ; ಉಗ್ರ ಸಂಘಟನೆಗಳ ವಿರುದ್ಧ ನಿರ್ಣಯ!

ಬೀಜಿಂಗ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮತ್ತೆ ಜಯ ಸಂದಿದ್ದು, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೂ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳ ವಿರುದ್ಧ ಬ್ರಿಕ್ಸ್ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಅಚ್ಚರಿ ಎಂದರೆ ಈ ಹಿಂದೆ ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಕಿಸ್ತಾನದ ವಿಚಾರ ಪ್ರಸ್ತಾಪ ಮಾಡಬಾರದು ಎಂದು ಹೇಳಿದ್ದ ಚೀನಾ ದೇಶವೇ ಇದೀಗ ಭಾರತದ ಬೆಂಬಲಕ್ಕೆ ನಿಲ್ಲುವ ಮೂಲಕ ಬ್ರಿಕ್ಸ್ ನಲ್ಲಿ ಉಗ್ರ  ಸಂಘಟನೆಗಳ ವಿರುದ್ಧ ನಿರ್ಣಯ ಕೈಗೊಳ್ಳುವಂತೆ ಮಾಡಿದೆ. ಇದಕ್ಕೂ ಮೊದಲು ಬ್ರಿಕ್ಸ್ ಸಮಾವೇಶದಲ್ಲಿ ತಮ್ಮ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೇ ಭಯೋತ್ಪಾದನೆ  ವಿರುದ್ಧ ಕಿಡಿಕಾರಿದ್ದರು. ಪ್ರಧಾನಿ ಮೋದಿ ಅವರ ಮಾತುಗಳಿಗೆ ಬ್ರಿಕ್ಸ್ ಸಮಾವೇಶದಲ್ಲಿ ಬೆಂಬಲ ವ್ಯಕ್ತವಾಯಿತು.

ಇದರ ಬೆನ್ನಲ್ಲೇ ಬ್ರಿಕ್ಸ್ ಸಮಾವೇಶದಲ್ಲಿ ಆಫ್ಘಾನಿಸ್ತಾನದ ತಾಲಿಬಾನ್, ಇರಾಕ್, ಇರಾನ್ ನ ಇಸಿಸ್/ಇಸಿಲ್, ಡೈಷ್ ಉಗ್ರ ಸಂಘಟನೆ, ಅಲ್ ಖೈದಾ ಮತ್ತು ಅದರ ಅಂಗ ಸಂಸ್ಥೆಗಳು,. ಹಖ್ಖಾನಿ ನೆಟ್ವರ್ಕ್, ಲಷ್ಕರ್ ಇ ತೊಯ್ಬಾ,  ಜೈಶ್ ಇ ಮೊಹಮದ್, ಟಿಟಿಪಿ ಮತ್ತು ಹಿಜ್ಬ್ ಉತಾ ತೆಹ್ರೀರ್ ಉಗ್ರ ಸಂಘಟನೆಗಳ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಈ ಉಗ್ರ ಸಂಘಟನೆಗಳಿಂದ ಅಶಾಂತಿ ಪಸರಿಸುತ್ತಿದ್ದು, ಇದು ಬ್ರಿಕ್ಸ್ ರಾಷ್ಟ್ರಗಳ ಪ್ರಾದೇಶಿಕ  ಅಸಮತೋಲನಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಡಲಾಗಿದೆ.

ಅಂತೆಯೇ ಬ್ರಿಕ್ಸ್ ರಾಷ್ಟ್ರಗಳಲ್ಲಿನ ಉಗ್ರ ದಾಳಿಗಳನ್ನು ಒಕ್ಕೋರಲಿನಿಂದ ಖಂಡಿಸಲಾಗಿದೆ.

No Comments

Leave A Comment