ಉಡುಪಿ: ಹಲವು ತಿಂಗಳ ಬಳಿಕ ಜಿಲ್ಲೆಯಲ್ಲಿ ಸಿಆರ್ಝಡ್ ವ್ಯಾಪ್ತಿ ಮರಳುಗಾರಿಕೆ ಮತ್ತೆ ಆರಂಭವಾಗಿದೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯ ಜಿಲ್ಲೆಯಲ್ಲಿ ಮರಳು ಉದ್ಯಮ ಸ್ಥಗಿತಗೊಂಡಿತ್ತು.
ಊರಿನ ಪರಿಸರ ಹಾಳಾಗುತ್ತದೆಂದು ಕೆಲವು ಜನರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಚೆನ್ನೈ ಹಸಿರು ಪೀಠವು ಜಿಲ್ಲೆಯ ಸಿಆರ್ಝಡ್ ಮರಳುಗಾರಿಕೆಗೆ ತಡೆಯಾಜ್ಞೆ ನೀಡಿತ್ತು. ಹಸಿರುಪೀಠದಿಂದ ತಡೆಯಾಜ್ಞೆ ತೆರವುಗೊಳಿಸಲು ಬಹಳ ತ್ರಾಸವಾಯಿತು. ಈಗ 142 ಮಂದಿಗೆ ಜಿಲ್ಲಾಡಳಿತ ಪರವಾನಿಗೆ ನೀಡಿದೆ. ಶುಕ್ರವಾರ ಜಿಲ್ಲೆಯ ಹಲವೆಡೆ ಮರಳುಗಾರಿಕೆ ಆರಂಭವಾಗಿದೆ. ಪರವಾನಿಗೆ ನೀಡುವಲ್ಲಿ ಷರತ್ತುಗಳ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ಕ್ರಮಕ್ಕೆ ಸಚಿವ ಪ್ರಮೋದ್ ಮಧ್ವರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ.