Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

2018ರೊಳಗೆ ದೇಶದ 800 ಎಂಜನೀಯರಿಂಗ್ ಕಾಲೇಜುಗಳಿಗೆ ಬೀಗ!

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದೊಳಗೆ ದೇಶಾದ್ಯಂತ ಸುಮಾರು 800 ಎಂಜಿನೀಯರಿಂಗ್ ಕಾಲೇಜುಗಳಿಗೆ ಬೀಗಮುದ್ರೆ ಜಡಿಯಲಾಗುವುದು.

ಕಳಪೆ ಗುಣಮಟ್ಟದ ಸಾಧನೆಯಿಂದಾಗಿ ಈ ಕಾಲೇಜುಗಳನ್ನು ಮುಚ್ಚಲು ಅಖಿಲಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನಿರ್ಧರಿಸಿದ್ದು ಸೆಪ್ಟಂಬರ್ 2ನೇ ವಾರದೊಳಗೆ ವರದಿ ಸಲ್ಲಿಸುವಂತೆ ಈ ಕಾಲೇಜುಗಳಿಗೆ ಸೂಚಿಸಲಾಗಿದೆ.

ಈ ಕಾಲೇಜುಗಳಲ್ಲಿ ಕಳೆದ 5 ವರ್ಷಗಳಿಂದ ಶೇ.30 ಕ್ಕಿಂತ ಕಡಿಮೆ ದಾಖಲಾತಿಯಿರುವ ಕಾರಣ ಮುಚ್ಚಲು ಹೇಳಲಾಗಿದೆ. ಜೊತೆಗೆ ಪಕ್ಕದಲ್ಲಿರುವ ಕಾಲೇಜುಗಳ ಜೊತೆ ವಿಲೀನಗೊಳ್ಳುವ ಅವಕಾಶ ಕೂಡ ನೀಡಿದ್ದೇವೆ ಎಂದು ಅನಿಲ್ ಸಹಸ್ರಬುದೆ ಹೇಳಿದ್ದಾರೆ.

ಕರ್ನಾಟಕದಲ್ಲಿ 600 ಎಂಜಿನೀಯರಿಂಗ್ ಕಾಲೇಜುಗಳಿದ್ದು, ಅದರಲ್ಲಿ ಕಳಪೆ ಗುಣಮಟ್ಟದ ಸಾಧನೆ ಮಾಡಿರುವ ಎಂಜಿನೀಯರ್ ಕಾಲೇಜುಗಳ ಪಟ್ಟಿ ಮಾಡಿದ್ದು, ಅದನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಿಲ್ಲ.

ಪಟ್ಟಿ ಮಾಡಿರುವ ಕಾಲೇಜುಗಳಿಗೆ ಕ್ಲೋಸ್ ಮಾಡುತ್ತೀರೋ ಅಥವಾ ಪಕ್ಕದಲ್ಲಿರುವ ಕಾಲೇಜುಗಳ ಜೊತೆ ವಿಲೀನವಾಗುತ್ತೀರೋ ಎಂಬ ಬಗ್ಗೆ ವರದಿ ಸಲ್ಲಿಸಲು ತಿಳಿಸಲಾಗಿದೆ. ಈ ಬದಲಾವಣೆ 2018-19ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ.

ದೇಶದಲ್ಲಿ ಒಟ್ಟು 10,361 ಎಂಜಿನೀಯರಿಂಗ್ ಕಾಲೇಜುಗಳಿವೆ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೇ 1,500, ತಮಿಳುನಾಡಿನಲ್ಲಿ 1,300, ಉತ್ತರ ಪ್ರದೇಶದಲ್ಲಿ 1,165 ಮತ್ತು ಆಂಧ್ರ ಪ್ರದೇಶದಲ್ಲಿ 800 ಕಾಲೇಜುಗಳಿದ್ದು, 37 ಲಕ್ಷ ಸೀಟುಗಳಲ್ಲಿ  27 ಲಕ್ಷ ಸೀಟುಗಳು ಇಂದಿಗೂ ಖಾಲಿಯಿವೆ.

ಇನ್ನೂ ಮುಚ್ಚುವ ಪಟ್ಟಿಯಲ್ಲಿರುವ ರಾಜ್ಯದ ಕೆಲ ಎಂಜಿನೀಯರ್ ಕಾಲೇಜುಗಳು ಗುಣಮಟ್ಟ ಉತ್ತಮಪಡಿಸಲು ಸಮಯಾವಕಾಶ ಕೋರಿವೆ.

No Comments

Leave A Comment