Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ಗುರ್ಮೀತ್ ಪುತ್ರ ಜಸ್ಮೀತ್ ಡೇರಾ ಸೌದದ ಉತ್ತರಾಧಿಕಾರಿ

ಚಂಡೀಗಢ್: ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಛಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಸಿಬಿಐ ವಿಶೇಷ ಕೋರ್ಟ್ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಇದೀಗ ಡೇರಾ ಸಚ್ಚಾ ಸೌದಾಕ್ಕೆ ಗುರ್ಮೀತ್ ಸಿಂಗ್ ಪುತ್ರ ಜಸ್ಮೀತ್ ಉತ್ತರಾಧಿಕಾರಿ ಎಂದು ಮಾಧ್ಯಮದ ವರದಿ ತಿಳಿಸಿದೆ.

ರಾಮ್ ರಹೀಮ್ ಸಿಂಗ್ ಪುತ್ರ ಜಸ್ಮೀತ್ ಇನ್ಸಾನ್ ಅವರನ್ನು ಡೇರಾ ಸಚ್ಚಾ ಸೌದಾದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ವರದಿ ವಿವರಿಸಿದೆ. ಜಸ್ಮೀತ್ ಉತ್ತರಾಧಿಕಾರಿಯಾಗಲು ಗುರ್ಮೀತ್ ತಾಯಿ ನಾಸೀಬ್ ಕೌರ್ ಹಾಗೂ ಗುರ್ಮೀತ್ ಪತ್ನಿ ಹರ್ಜಿತ್ ಕೌರ್ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದೆ.

ಅಲ್ಲದೇ ಗುರ್ಮೀತ್ ಸ್ಥಾನಕ್ಕೆ ಜಸ್ಮೀತ್ ಉತ್ತರಾಧಿಕಾರಿ ಎಂಬುದನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ ನಾಸೀಬ್ ಹಾಗೂ ಹರ್ಜಿತ್ ರೋಹ್ಟಕ್ ಜೈಲಿನಲ್ಲಿರುವ ಗುರ್ಮೀತ್ ರಾಮ್ ಸಿಂಗ್ ನನ್ನು ಭೇಟಿಯಾಗಲಿದ್ದಾರೆ ಎಂದು ವರದಿ ಹೇಳಿದೆ.

No Comments

Leave A Comment