Log In
BREAKING NEWS >
ಶಿರಾ ಲಾರಿ -ಬಸ್ಸು ಭೀಕರ ರಸ್ತೆ ಅಪಘಾತ 7 ಮಂದಿ ದುರ್ಮರಣ......ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ-ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

‘ಭರ್ಜರಿ’ ಹೀರೋನನ್ನು ಲವರ್ ಬಾಯ್ ಆಗಿ ಬದಲಾಯಿಸಿದ ಗುಳಿಕೆನ್ನೆ ಬೆಡಗಿ!

ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಭರ್ಜರಿ ಚಿತ್ರದ ಟೀಸರ್ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಡ್ಯಾನ್ಸ್ ಹಾಗೂ ಪರಿಚಯಾತ್ಮಕ ಹಾಡು ಆನ್ ಲೈನ್ ಟ್ರೆಂಡಿಂಗ್ ಆಗಿದ್ದು ಪ್ರೇಕ್ಷಕರಲ್ಲಿ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಸದ್ಯ ಇದೇ ಸಿನಿಮಾದಲ್ಲಿ ಧ್ರುವ ಸರ್ಜಾ ಮತ್ತೊಂದು ಸರ್ ಪ್ರೈಸ್ ನೀಡಿದ್ದಾರೆ, ನಾಯಕಿಯರಾದ ರಚಿತಾ ರಾಮ್, ಹರಿಪ್ರಿಯಾ ಹಾಗೂ ವೈಶಾಲಿ ದೀಪಕ್ ಅವರುಗಳ ಜೊತೆಗೆ ಟಪ್ಪಾಂಗುಚಿ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಹರಿಕೃಷ್ಣ ಸಂಗೀತ ನಿರ್ದೇಶಿಸಿ , ನಿರ್ದೇಶಕ ಎ.ಪಿ ಅರ್ಜುನ್ ಸಾಹಿತ್ಯ ಬರೆದಿರುವ ರಂಗಾ ಬಾರೋ… ಹಾಡಿಗೆ ಟಪ್ಪಾಂಗುಚ್ಚಿ ಹಾಡು ಮತ್ತಷ್ಟು ಕ್ರೇಜ್ ಸೃಷ್ಟಿಸಿದೆ. ಸ್ಯಾಂಡಲ್ ವುಡ್ ಆ್ಯಕ್ಷನ್ ಕಿಂಗ್ ಹೆಣ್ಣು ಮಕ್ಕಳ ಜೊತೆ ರೋಮಾನ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾಗೆ ಸೆನ್ಸಾರ್ ಬೋರ್ಡ್ ಕ್ಲಿಯರೆನ್ಸ್ ಸಿಕ್ಕಿದ್ದು, ಚಿತ್ರದಲ್ಲಿ ಯಾವುದೇ ದೃಶ್ಯವನ್ನು ಬ್ಲರ್ ಮಾಡದೇ ಯು/ಎ ಸರ್ಟಿಫಿಕೇಟ್ ಸಿಕ್ಕಿರುವುದಕ್ಕೆ ನಿರ್ದೇಶಕ ಚೇತನ್ ಕುಮಾರ್ ಹರ್ಷ ವ್ಯಕ್ತ ಪಡಿಸಿದ್ದಾರೆ. ಶೀಘ್ರವೇ ಭರ್ಜರಿ ಚಿತ್ರಮಂದಿಗಳಗಳಲ್ಲಿ ಗ್ರಾಂಡ್ ಒಪನಿಂಗ್ ತೋರಲಿದೆ.

No Comments

Leave A Comment