Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಗೋರಖಪುರ:ಮೂರು ದಿನಗಳಲ್ಲಿ  61 ಮಕ್ಕಳು ಸಾವು

ಗೋರಖಪುರ: ಇಲ್ಲಿನ ಬಿಆರ್‍‍ಡಿ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಮೂರು ದಿನಗಳಲ್ಲಿ  61 ಮಕ್ಕಳು ಸಾವಿಗೀಡಾಗಿದ್ದಾರೆ. ಮೆದುಳು ಜ್ವರ, ನವಜಾತ ಶಿಶುಗಳ ಆರೋಗ್ಯ ಸಮಸ್ಯೆ, ನ್ಯುಮೋನಿಯಾ ಮೊದಲಾದ ಕಾಯಿಲೆಗಳೇ ಮಕ್ಕಳ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೇ ಇದೇ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆ ಕೊರತೆಯಿಂದಾಗಿ 48 ಗಂಟೆಗಳಲ್ಲಿ 30 ಮಕ್ಕಳು ಸಾವಿಗೀಡಾಗಿದ್ದರು.
ಆಗಸ್ಟ್ 27, 28 ಮತ್ತು 29ರ ದಾಖಲೆಗಳನ್ನು ಪರಿಶೀಲಿಸಿದರೆ ಒಟ್ಟು 61 ಮಕ್ಕಳು ಸಾವಿಗೀಡಾಗಿದ್ದಾರೆ. ಇದರಲ್ಲಿ 11 ಮಕ್ಕಳು ಮೆದುಳು ಜ್ವರದಿಂದಾಗಿ ಸಾವಿಗೀಡಾದರೆ  25 ನವಜಾತ ಶಿಶುಗಳು ಮತ್ತು ಮಕ್ಕಳ ವಾರ್ಡ್‍ನಲ್ಲಿ ಚಿಕಿತ್ಸೆಯಲ್ಲಿದ್ದ 25 ಮಕ್ಕಳು ಇನ್ನಿತರ ಕಾಯಿಲೆಯಿಂದಾಗಿ ಸಾವಿಗೀಡಾಗಿದ್ದಾರೆ.

ಉತ್ತರಪ್ರದೇಶದಲ್ಲಿ ಭಾರಿ ಮಳೆಯಾಗಿರುವುದಿಂದ ಪ್ರವಾಹ ಮತ್ತು ಅಲ್ಲಲ್ಲಿ ನೀರು ತಂಗಿರುವ ಕಾರಣ ಅಕ್ಯೂಟ್ ಎನ್‍ಸಿಫಿಲೈಟಿಸ್ ಸಿಂಡ್ರೋಮ್ (ಎಇಎಸ್ ) ಹರಡುವ ಸಾಧ್ಯತೆಗಳು ಜಾಸ್ತಿ ಇವೆ. ಹಾಗಾಗಿ ಮರಣ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ವೈದ್ಯರು ಹೇಳಿದ್ದಾರೆ.

ಏತನ್ಮಧ್ಯೆ, ಬಿಆರ್‍‍ಡಿ ಪ್ರಾಂಶುಪಾಲ ಡಾ.ಪಿ.ಕೆ ಸಿಂಗ್ ಅವರಿಗೆ ಹಲವಾರು ಬಾರಿ ಫೋನ್ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ಮಕ್ಕಳ ಸಾವಿನ ಬಗ್ಗೆ ಪ್ರತಿಕ್ರಿಯಿಸಿದ ಅದೇ ಆಸ್ಪತ್ರೆಯ ಮಕ್ಕಳ ತಜ್ಞ ಡಾ, ಆರ್‍.ಎನ್. ಸಿಂಗ್, ಎಇಎಸ್  ಹರಡದಂತೆ ಸಾಕಷ್ಟು  ಕ್ರಮಗಳನ್ನು ಜನವರಿ ತಿಂಗಳಲ್ಲೇ ಕೈಗೊಳ್ಳಲಾಗಿತ್ತು. ಅದರ ನಂತರ ಎಲ್ಲರೂ ಉತ್ತರಪ್ರದೇಶದ ಚುನಾವಣೆಯಲ್ಲಿ ಬ್ಯುಸಿಯಾದುದರಿಂದ ಅತ್ತ ಹೆಚ್ಚು ಗಮನ ಹರಿಸಿಲ್ಲ ಎಂದಿದ್ದಾರೆ.

ಭಾರೀ ಮಳೆಯೂ ಇಂಥಾ ರೋಗ ಉಲ್ಬಣವಾಗಲು ಕಾರಣ ಎಂದು ಹೇಳಿದ ಸಿಂಗ್, ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್,  ಮಕ್ಕಳಿಗೆ ರೋಗ ನಿರೋಧಕ ಲಸಿಕೆಗಳನ್ನೂ ನೀಡಲಾಗಿದೆ. ಆಗಸ್ಟ್ 10 ಮತ್ತು 11 ರಂದು ಈ ಆಸ್ಪತ್ರೆಯಲ್ಲಿ 30ಕ್ಕಿಂತಲೂ ಹೆಚ್ಚು ಮಕ್ಕಳು ಸಾವಿಗೀಡಾದ ಪ್ರಕರಣದ ನಂತರ ರಾಜ್ಯ ಸರ್ಕಾರ ಇಲ್ಲಿ ವೈದ್ಯರ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಆದರೆ ಚಿಕಿತ್ಸೆ ಪಡೆಯಲು ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ವಿಪರೀತ ಹೆಚ್ಚಾಗಿರುವುದರಿಂದ ಒಂದೇ ಹಾಸಿಗೆಯಲ್ಲಿ ಮೂರು ನಾಲ್ಕು ಮಕ್ಕಳನ್ನು ಮಲಗಿಸಬೇಕಾದ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.

No Comments

Leave A Comment