Log In
BREAKING NEWS >
ಚು೦...ಚು೦ ಚಳಿಯಲ್ಲಿ ಬೃಹತ್ ಜನಸ್ತೋಮದ ನಡುವೆ ಪಲಿಮಾರು ಮಠಾಧೀಶರ ದ್ವಿತೀಯ ಪರ್ಯಾಯದ ಭವ್ಯ ಮೆರಣಿಗೆ...

ಅಫ್ಘಾನ್‌:USA ರಾಯಭಾರ ಕಚೇರಿ ಬಳಿಯಲ್ಲೇ ಬಾಂಬ್‌ ಸ್ಫೋಟ

ಕಾಬೂಲ್‌: ಇಲ್ಲಿನ ಭಾರೀ ಭದ್ರತೆಯ ಅಮೆರಿಕ ರಾಯಭಾರ ಕಚೇರಿಯ ಬಳಿಯಲ್ಲೇ ಮಂಗಳವಾರ ಬಾಂಬ್‌ ಸ್ಫೋಟ ನಡೆದಿದ್ದು, ಓರ್ವ ಸಾವನ್ನಪ್ಪಿ ಹಲವರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

ಕಾಬೂಲ್‌ ಬ್ಯಾಂಕ್‌ನ ಕಚೇರಿಯ ದ್ವಾರದ ಬಳಿಯಲ್ಲೇ ಬಾಂಬ್‌ ಸ್ಫೋಟಗೊಂಡಿದ್ದು , ಸ್ಫೋಟದ ತೀವ್ರತೆಗೆ ಕಟ್ಟಡಕ್ಕೆ ಭಾರೀ ಹಾನಿಯಾಗಿದೆ ಎಂದು ವರದಿಯಾಗಿದೆ.

ತಕ್ಷಣಕ್ಕೆ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ. ಈದ್‌ ಸಂಭ್ರಮಾಚರಣೆಗೆಂದು ಹಣ ತೆಗೆಯಲು ಭಾರೀ ಸಂಖ್ಯೆಯಲ್ಲಿ ಬ್ಯಾಂಕ್‌ ಬಳಿ ಸೇರಿದ್ದ ವೇಳೆಯಲ್ಲೇ ಸ್ಫೋಟ ನಡೆದಿದೆ.

ಇದೀಗ ಕಾಬೂಲ್‌ನಾದ್ಯಂತ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.

No Comments

Leave A Comment