Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ....ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಮರ್ಕಂಜ: ಕೊಟ್ಟಿಗೆ ಕುಸಿದು ವೃದ್ಧ ಸಾವು

ಸುಳ್ಯ: ಸುಳ್ಯ ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸೋಮವಾರ ಕೊಟ್ಟಿಗೆ ಕುಸಿದು ವೃದ್ಧರೋರ್ವರು ಮೃತಪಟ್ಟಿದ್ದಾರೆ. ಮರ್ಕಂಜ ಗ್ರಾಮದ ಗೋಳಿಯಡ್ಕ ಶಾಲೆ ಬಳಿಯ ಕೊರತ್ತಿಕಜೆ ನಿವಾಸಿ ಕಬ್ಬು (75) ಅವರು ಮೃತಪಟ್ಟವರು.

ಸೋಮವಾರ ಅಪರಾಹ್ನ 3 ಗಂಟೆಯ ಸುಮಾರಿಗೆ ದುರ್ಘ‌ಟನೆ ಸಂಭವಿಸಿದೆ. ಕಬ್ಬು ಅವರು ಮನೆಯಿಂದ ಕೊಟ್ಟಿಗೆಗೆ ತೆರಳುತ್ತಿದ್ದಂತೆ ಏಕಾಏಕಿ ಕಂಬಗಳು ಮುರಿದು ಕೊಟ್ಟಿಗೆ ಪೂರ್ತಿ ಧರಾಶಾಯಿಯಾಯಿತು. ಕಬ್ಬು ಅವರು ಅದರಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟರು.

ಘಟನಾ ಸ್ಥಳಕ್ಕೆ ತಹಶೀಲ್ದಾರ್‌ ಗಣೇಶ್‌, ಕಂದಾಯ ನಿರೀಕ್ಷಕ ಅವಿನ್‌ ರಂಗತ್ತಮಲೆ ಹಾಗೂ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

ಮನೆ ಕುಸಿತ
ಕನಕಮಜಲು ಗ್ರಾಮದ ಮಳಿ ಕಾಲನಿ ಸಮೀಪದ ಚಂದ್ರಶೇಖರ ಅವರ ಮನೆ ಕುಸಿದು ನೆಲಸಮವಾಗಿದೆ. ಈ ವೇಳೆ ಮನೆ ಮಂದಿ ಇಲ್ಲದಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ.

ಸೇತುವೆ ಮುಳುಗಡೆ
ಭಾರೀ ಮಳೆಯ ಪರಿಣಾಮದಿಂದ ಸುಳ್ಯದ ಬೆಟ್ಟಂಪಾಡಿ ಸೇತುವೆ ಮುಳುಗಡೆಯಾಗಿ ಸಂಚಾರ ಅಸ್ತವ್ಯಸ್ತ  ಗೊಂಡಿತು. ಹೆ¨ªಾರಿಯ ರಸ್ತೆ  ಗಳಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೂ ಅಡೆ ತಡೆ

No Comments

Leave A Comment