Log In
BREAKING NEWS >
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮೇ ೧೦ರ೦ದು ಶ್ರೀಗೋಕರ್ಣಮಠಾಧೀಶರು ತಮ್ಮ ಶಿಷ್ಯರೊ೦ದಿಗೆ ಆಗಮಿಸಲಿದ್ದು ೫ದಿನಗಳ ಕಾಲ ಮೊಕ್ಕ೦ ಹೂಡಲಿದ್ದಾರೆ....

ಟ್ರಂಪ್ ಕೆಣಕಿದ ಕಿಮ್ ಜಾಂಗ್ ಉನ್: ಮತ್ತೆ 3 ಅಣ್ವಸ್ತ್ರ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕಗೆ ಸೆಡ್ಡು ಹೊಡೆದಿರುವ ಯುದ್ಧೋನ್ಮತ್ತ ಉತ್ತರ ಕೊರಿಯಾ ಮತ್ತೆ ಮೂರು ಅಣ್ವಸ್ತ್ರ ಕ್ಷಿಪಣಿಗಳನ್ನು ಪ್ರಯೋಗಿಸಿದೆ.

ವಿಶ್ವಸಂಸ್ಥೆ ಮತ್ತು ಜಗತ್ತಿನ ಶಕ್ತಿ ಶಾಲಿ ರಾಷ್ಟ್ರಗಳ ಎಚ್ಚರಿಕೆಯ ನಡುವೆಯೂ ಪಯೊಂಗ್ ಯಾಂಗ್ ಮೂರು ಅಣ್ವಸ್ತ್ರ ಕ್ಷಿಪಣಿಗಳನ್ನು ಪೂರ್ವ ಸಮುದ್ರದತ್ತ ಉಡಾಯಿಸಿ ಪುನಃ ಭೀತಿಯ ವಾತಾವರಣ ಮೂಡಿಸಿದೆ. ಇನ್ನು ಉತ್ತರ ಕೊರಿಯಾ ಮೂರು ಕ್ಷಿಪಣಿಗಳ ಪ್ರಯೋಗ ನಡೆಸಿರುವುದನ್ನು ಅಮೆರಿಕ ಮಿಲಿಟರಿ ಮತ್ತು ದಕ್ಷಿಣ ಕೊರಿಯಾದ ಉನ್ನತಾಧಿಕಾರಿಗಳು ಖಚಿತಪಡಿಸಿದ್ದಾರೆ.

ಉತ್ತರ ಕೊರಿಯಾ ಉಡಾಯಿಸಿರುವ ಮೂರು ಖಂಡಾಂತರ ಕ್ಷಿಪಣಿಗಳು ಅಲ್ಪ ಸಾಮರ್ಥ್ಯದ ಹೊಂದಿದ್ದು ಮೊದಲ ಎರಡು ಕ್ಷಿಪಣಿಗಳು ನಿರೀಕ್ಷಿತ ಗುರಿ ತಲುಪುವಲ್ಲಿ ವಿಫಲವಾಗಿದ್ದವು. ಇನ್ನು ಮೂರನೇ ಕ್ಷಿಪಣಿ ಕರಾರುವಕ್ಕಾಗಿ ನಿಗದಿದ ಸ್ಥಳ ತಲುಪಿ ಸ್ಫೋಟಗೊಂಡಿತು ಎಂದು ಅಮೆರಿಕ ಪೆಸಿಫಿಕ್ ಕಮ್ಯಾಂಡ್ ಹೇಳಿದೆ.

No Comments

Leave A Comment