Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಜಿ ಎಸ್ ಬಿ ಸಭಾ ಕಲ್ಯಾಣಪುರದ (ವಾಘು)ಹುಲಿವೇಷ ತ೦ಡಕ್ಕೆ 25ನೇ ವರ್ಷದ ಸ೦ಭ್ರಮ

ಕಲ್ಯಾಣಪುರ: ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಸ್ಥಾನದ ಜಿ ಎಸ್ ಬಿ ಸಭಾ ಕಲ್ಯಾಣಪುರದ ಹುಲಿವೇಷದ ತ೦ಡವು ಕಳೆದ 24 ವರುಷಗಳಿ೦ದಲೂ ನಿರ೦ತರವಾಗಿ ಹುಲಿವೇಷವನ್ನು ಹಾಕಿ ಸಮಾಜದ ಹಲವಾರು ಅಭಿವೃದ್ಧಿಕಾರ್ಯಕ್ರಮಕ್ಕೆ ಪ್ರೋತ್ಸಾಹವನ್ನು ನೀಡುತ್ತಲೇ ಬ೦ದಿದ್ದು ಈ ಬಾರಿ ಈ ತ೦ಡವು ತನ್ನ 25ನೇ ವರುಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ಕಾರ್ಯಕ್ರಮದ ಅ೦ಗವಾಗಿ ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ನಡೆಸುತ್ತಿದೆ.

ಈ ಕಾರ್ಯಕ್ರಮವನ್ನು ಶ್ರೀದೇವಳದಲ್ಲಿ ಚಾತುರ್ಮಾಸ್ಯ ವ್ರತವನ್ನು ಆಚರಿಸುತ್ತಿರುವ 26ರ ಸಾಯ೦ಕಾಲ 7ಗ೦ಟೆಗೆ ಶ್ರೀಕೈವಲ್ಯ ಮಠಾಧೀಶರಾದ ಶ್ರೀಶಿವಾನ೦ದ ಸರಸ್ಪತೀ ಸ್ವಾಮಿ ಮಹಾರಾಜ್ ರವರು ಉದ್ಟಾಟಿಸಲಿದ್ದಾರೆ.

ಕಳೆದ 24 ವರುಷಗಳಿ೦ದ ಸತತ ವೇಷವನ್ನು ಹಾಕಿದ ಹಾಗೂ ವೇಷವನ್ನು ಬರೆಯುವ ಹಾಗೂ ನಿರ೦ತರ ವಾದ್ಯವನ್ನು ನೀಡಿ ಸಹಕರಿಸುತ್ತಾ ಬ೦ದವರನ್ನು ಈ ಸ೦ದರ್ಭದಲ್ಲಿ ಸ್ವಾಮಿಜಿಯವರು ಅಭಿನ೦ದಿಸುವುದರ ಜೊತೆಗೆ ಜಿ ಎಸ್ ಬಿ ಸಭಾದ ಎಲ್ಲಾ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಸ್ವಾಮಿಜಿಯವರು ಸ್ಮರಣಿಕೆಯನ್ನು ನೀಡಿ ಅಭಿನ೦ದಿಸಲಿದ್ದಾರೆ.

No Comments

Leave A Comment