Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ರಾಬರ್ಟ್‌ ವಾದ್ರಾ ಹಗರಣ: ಸಿಬಿಐ ತನಿಖೆಗೆ ರಾಜಸ್ಥಾನ ಸರಕಾರ ಶಿಫಾರಸು

ಜೈಪುರ : ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಶಾಮೀಲಾಗಿರುವರೆನ್ನಲಾದ ಬಿಕಾನೇರ್‌ ಭೂ ಕಬಳಿಕೆ ಹಗರಣ ಮತ್ತು ಹಣ ದುರುಪಯೋಗ ಹಗರಣದ ತನಿಕೆಯನ್ನು ಸಿಬಿಐ ಶೀಘ್ರವೇ ಆರಂಭಿಸಲಿದೆ.

ರಾಜಸ್ಥಾನ ಸರಕಾರ, ರಾಬರ್ಟ್‌ ವಾದ್ರಾ ಹಗರಣಗಳ ತನಿಖೆಯನ್ನು ನಡೆಸುವಂತೆ ಸಿಬಿಐ ಅನ್ನು ಕೇಳಿಕೊಂಡಿದೆ ಎಂದು ಕೇಂದ್ರ ಸಹಾಯಕ ಗೃಹ ಸಚಿವ ಗುಲಾಬ್‌ ಚಂದ್‌ ಕಟಾರಿಯಾ ತಿಳಿಸಿದ್ದಾರೆ.

ವಾದ್ರಾ ಹಗರಣಗಳು ಸಂಕೀರ್ಣ ಸ್ವರೂಪದ್ದಾಗಿವೆ ಮತ್ತು ಹಲವು ವರ್ಷಗಳ ಅವಧಿಗೆ ಅವು ಹರಡಿಕೊಂಡಿವೆ. ನಾವು ಈ ಹಗರಣಗಳ ಬಗ್ಗೆ ನಮ್ಮ ಕಡೆಯಿಂದ ತನಿಖೆ ನಡೆಸಿದ್ದೇವೆ; ಅನೇಕರನ್ನೂ ಬಂಧಿಸಿದ್ದೇವೆ. ಆದರೆ ಈ ಒಟ್ಟು ಹಗರಣಗಳ ಸಮಗ್ರ ತನಿಖೆಯನ್ನು ಸಿಬಿಐ ನಡೆಸುವುದೇ ಒಳಿತೆಂದು ತೀರ್ಮಾನಿಸಿದ್ದೇವೆ ಮತ್ತು ಅಂತೆಯೇ ಸಿಬಿಐ ಅನ್ನು ಕೇಳಿಕೊಂಡಿದ್ದೇವೆ ಎಂದು ಕಟಾರಿಯಾ ಮಾಧ್ಯಮಕ್ಕೆ ತಿಳಿಸಿದರು.

No Comments

Leave A Comment