Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಕಿರಣ್‌ ಸ್ಟುಡಿಯೋದ ವಾಸುದೇವ ಅವರಿಗೆ “ಛಾಯಾಸ್ಫೂರ್ತಿ’ಪುರಸ್ಕಾರ

ಉಡುಪಿ: ಉಡುಪಿ ಪ್ರಸ್‌ ಫೊಟೊಗ್ರಾಫ‌ರ್ ಅಸೋಸಿಯೇಶನ್‌ (ಉಪ್ಪಾ), ರೋಟರಿ ಮಲ್ಪೆ-ಕೊಡವೂರು ಹಾಗೂ ಗ್ಯಾಲರಿ ಅದಿತಿ ಸಂಯುಕ್ತ ಆಶ್ರಯದಲ್ಲಿ ಕುಂಜಿಬೆಟ್ಟು ಗ್ಯಾಲರಿಯಲ್ಲಿ ಆ. 20ರಂದು ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಿರಣ್‌ ಸ್ಟುಡಿಯೋದ ವಾಸುದೇವ ಆಚಾರ್ಯ ಅವರಿಗೆ ಉಪ್ಪಾ-ರೋಟರಿ “ಛಾಯಾಸ್ಫೂರ್ತಿ’ ಪುರಸ್ಕಾರ ಪ್ರದಾನಿಸಲಾಯಿತು.

ಪ್ರಶಸ್ತಿ ಪ್ರದಾನಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಂಜೀವ ಎಂ. ಪಾಟೀಲ್‌ ಅವರು ಮಾತನಾಡಿ, ಜೀವನದಲ್ಲಿ ಎದುರಾಗುವ ವಿವಿಧ ರೀತಿಯ ಜಂಜಾಟಗಳಿಗೆ ಛಾಯಾಗ್ರಹಣದಂಥ ಹವ್ಯಾಸಗಳು ಔಷಧಿಯಾಗಬಲ್ಲದು. ಅದನ್ನು ಮೈಗೂಡಿಸಿಕೊಳ್ಳುವ ಇಚ್ಛಾಶಕ್ತಿಯ ಅಗತ್ಯತೆ ಇದೆ ಎಂದರು.

ಡಾ| ಕಿರಣ್‌ ಆಚಾರ್ಯ ಅವರ ವಿಶ್ವ ಪರ್ಯಟನೆಯ ಚಿತ್ರ ವೈವಿಧ್ಯಗಳ ಸ್ಲೆ„ಡ್‌ ಪ್ರದರ್ಶನ ನಡೆಯಿತು. ರೋಟರಿ ಕಾರ್ಯದರ್ಶಿ ಸುದೇಶ್‌ ಕುಮಾರ್‌, ದಯಾನಂದ ನಿಟ್ಟೂರು, ರಾಘವೇಂದ್ರ ಪ್ರಭು ಕರ್ವಾಲು, ಮಂಜುನಾಥ ದೇವಾಡಿಗ ಉಪಸ್ಥಿತರಿದ್ದರು.

ರೋಟರಿ ಮಲ್ಪೆ-ಕೊಡವೂರು ಅಧ್ಯಕ್ಷ ತಾರಾನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪ್ಪಾ ಅಧ್ಯಕ್ಷ ಜನಾರ್ದನ ಕೊಡವೂರು ಸ್ವಾಗತಿಸಿದರು. ರೋಟರಿ ಮಾಜಿ ಅಧ್ಯಕ್ಷೆ ಪೂರ್ಣಿಮಾ ಜನಾರ್ದನ್‌ ಸಮ್ಮಾನಪತ್ರ ವಾಚಿಸಿದರು. ಗ್ಯಾಲರಿ ಅದಿತಿ ಆಡಳಿತ ವಿಶ್ವಸ್ಥ ಡಾ| ಕಿರಣ್‌ ಆಚಾರ್ಯ ವಂದಿಸಿದರು.

No Comments

Leave A Comment