Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಶರತ್ ಮಡಿವಾಳ ಹತ್ಯೆ ಕೇಸು: ಮತ್ತೆ ಇಬ್ಬರ ಬಂಧನ

ಮಂಗಳೂರು: ಆರ್ ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಯುವಕರು ಶರೀಫ್ ಮತ್ತು ಜಬ್ಬರ್ ಎಂಬುವವರಾಗಿದ್ದಾರೆ. ಇವರ ಬಂಧನದ ನಂತರ ಇದುವರೆಗೆ ಶರತ್ ಮಡಿವಾಳ ಹತ್ಯೆ ಕೇಸಿನಲ್ಲಿ ಬಂಧಿತರ ಸಂಖ್ಯೆ 10ಕ್ಕೇರಿದೆ.
ಜಬ್ಬರ್ ನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಮುಂದಿನ ವಿಚಾರಣೆಗಾಗಿ 7 ದಿನಗಳವರೆಗೆ ಪೊಲೀಸ್ ಕಸ್ಟಡಿಗೊಪ್ಪಿಸಲಾಗಿದೆ.

ಶರೀಫ್ ನನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ದಕ್ಷಿಣ ಕನ್ನಡ ಪೊಲೀಸ್ ಸೂಪರಿಂಟೆಂಡೆಂಟ್ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಈ ಹಿಂದೆ ಪೊಲೀಸರು ಅಬ್ದುಲ್ ಶಾಜಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಖಲೀಲುಲ್ಲಾ, ರಿಯಾಜ್ ಪಾರಂಕಿ, ಸಾದಿಕ್ ನೆಲ್ಯಾಡಿ, ಖಲೀಮ್, ರಹಿಮ್ ಅಲಡಿ, ಸಲೇಹ ಅಲಿಯಾಸ್ ಸ್ವಲೇಹ್ ಮತ್ತು ಸಾದಿಕ್ ಪಾಶಾ ಅವರನ್ನು ಬಂಧಿಸಿದ್ದರು.

ಮಂಗಳೂರು ಸಮೀಪ ಬಿ.ಸಿ.ರೋಡ್ ನಲ್ಲಿ ಕಳೆದ ಜುಲೈ 4ರಂದು ಶರತ್ ಮಡಿವಾಳ ಅವರನ್ನು ಇರಿದು ಹತ್ಯೆ ಮಾಡಲಾಗಿತ್ತು. ಈ ಘಟನೆ ಬಳಿಕ ವಾರಗಳ ಕಾಲ ಜಿಲ್ಲೆಯಲ್ಲಿ ಪ್ರಕ್ಷುಬ್ದ ವಾತಾವರಣ ನೆಲೆಸಿತ್ತು.

No Comments

Leave A Comment