Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಹೊಸೂರು ಕ್ಷೇತ್ರದ ಶಾಸಕರನ್ನು ಶಶಿಕಲಾ ಭೇಟಿಯಾಗಿದ್ದರು: ಮಾಜಿ ಡಿಐಜಿ ರೂಪಾ ಆರೋಪ

ಬೆಂಗಳೂರು: ಪರಪ್ಪನ ಕೇಂದ್ರ ಕಾರಾಗೃಹದ ಸಮೀಪದಲ್ಲಿರುವ ಹೊಸೂರು ಕ್ಷೇತ್ರದ ಶಾಸಕರ ಮನೆಗೆ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಭೇಟಿ ನೀಡಿದ್ದು, ಅದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಲ್ಲಿಸಿದ ವರದಿಯಲ್ಲಿ ಮಾಜಿ ಡಿಐಜಿ ಹಾಗೂ ರಸ್ತೆ ಸುರಕ್ಷತೆ ಮತ್ತು ಸಂಚಾರಿ ವಿಭಾಗದ ಆಯುಕ್ತೆ ಡಿ.ರೂಪಾ ಆರೋಪಿಸಿದ್ದಾರೆ.

ಜುಲೈ 31ರಂದು ನೀಡಿದ ನೊಟೀಸ್ ಗೆ ಸಂಬಂಧಪಟ್ಟಂತೆ ಭ್ರಷ್ಟಾಚಾರ ನಿಗ್ರಹ ದಳದ ಮುಂದೆ ಮೊನ್ನೆ 19ರಂದು ಹಾಜರಾದ ರೂಪಾ ಅವರು, ಶಶಿಕಲಾ ಹೊಸೂರು ಕ್ಷೇತ್ರದ ಶಾಸಕರ ಮನೆಗೆ ಭೇಟಿ ನೀಡಿರುವುದು ಜೈಲಿನ ಪ್ರವ್ಶ ಭಾಗದಲ್ಲಿರುವ ಮತ್ತು ಗೇಟ್ ಸಂಖ್ಯೆ 1 ಮತ್ತು ಗೇಟ್ ಸಂಖ್ಯೆ 2ರಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸಿಗಬಹುದು ಎಂದು ಹೇಳಿದ್ದಾರೆ.

ತಮ್ಮ ಆರೋಪವನ್ನು ಮತ್ತೆ ಪುನಃ ಒತ್ತಿ ಹೇಳಿರುವ ರೂಪಾ, ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಮೇಲ್ದರ್ಜೆಯ ಕೈದಿಯಾಗಿ ಶಶಿಕಲಾ ಪರಪ್ಪನ ಜೈಲಿನಲ್ಲಿ ಜೀವನ ನಡೆಸುತ್ತಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಕೇಸಿನಲ್ಲಿ ಕೈದಿಯಾಗಿರುವ ಶಶಿಕಲಾ ವಿರುದ್ಧ ರೂಪಾ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಾಲ್ಕು ವಿಡಿಯೊ ತುಣುಕುಗಳನ್ನು ಹೊಂದಿದ ಸಿಡಿಯನ್ನು ಸಲ್ಲಿಸಿದ್ದಾರೆ.

No Comments

Leave A Comment