Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

10 ರೂ. ನಾಣ್ಯ ಸ್ವೀಕರಿಸದಿದ್ರೆ ಪೊಲೀಸರಿಗೆ ದೂರು ಕೊಡಿ

ಚಿಕ್ಕಮಗಳೂರು: ದೇಶಾದ್ಯಂತ 10 ರೂ. ನಾಣ್ಯ ಇಂದಿಗೂ ಚಲಾವಣೆಯಲ್ಲಿದೆ. ನಾಣ್ಯವನ್ನು ಅಮಾನ್ಯ ಮಾಡಿಲ್ಲ. ನಾಣ್ಯ ಚಲಾವಣೆಯಿಲ್ಲ ಎಂಬುದು ಸುಳ್ಳುವದಂತಿ. ಈ ನಾಣ್ಯವನ್ನು ಸ್ವೀಕರಿಸದಿರುವವರ ವಿರುದಟಛಿ ಪೊಲೀಸರಿಗೆ ದೂರು ಸಲ್ಲಿಸಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಕ್ಷೇತ್ರೀಯ ನಿರ್ದೇಶಕ ಯುಜನ್‌ ಇ.ಕಾರ್ತಿಕ್‌ ಹೇಳಿದರು.

ನಗರದಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಸೋಮವಾರ ಏರ್ಪಡಿಸಿದ್ದ ಆರ್ಥಿಕ ಸಾಕ್ಷರತೆ ಹಾಗೂ ತಿಳಿವಳಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 10 ರೂ. ನಾಣ್ಯ ಇಂದು ಸಹ ಸಕ್ರಮ ನಾಣ್ಯ (ಲೀಗಲ್‌ ಟೆಂಡರ್‌)ವಾಗಿದೆ. ಕೇಂದ್ರ ಸರ್ಕಾರ 500 ಮತ್ತು 1000 ರೂ. ನೋಟುಗಳನ್ನು ಅಮಾನ್ಯ ಮಾಡಿದಂತೆ 10 ರೂ. ನಾಣ್ಯವನ್ನು ಅಮಾನ್ಯಗೊಳಿಸಿಲ್ಲ ಎಂದರು.

No Comments

Leave A Comment