Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

15 ರ ಮಗಳ ಮೇಲೆ ಪೊಲೀಸ್‌ನಿಂದ ರೇಪ್‌; ಶಾಕ್‌ಗೆ ತಂದೆ ಸಾವು

ಲಕ್ನೋ: ಉತ್ತರಪ್ರದೇಶದ ಬಲ್ಲಿಯಾದಲ್ಲಿ ನಡೆದ ಹೇಯ ಘಟನೆಯೊಂದರಲ್ಲಿ 15 ವರ್ಷದ ಬಾಲಕಿಯ ಮೇಲೆ ಪೊಲೀಸ್‌ ಕಾನ್ಸ್‌ಟೇಬಲ್‌ವೊಬ್ಬ ಕಾಮಾಂಧನಾಗಿ ಅತ್ಯಾಚಾರ ಎಸಗಿದ್ದಾನೆ. ಘಟನೆಯ ಬಳಿಕ ಬಾಲಕಿಯ ತಂದೆ ಆಘಾತಗೊಂಡು ಸಾವನ್ನಪ್ಪಿದ್ದಾರೆ.

ಶುಕ್ರವಾರ ಘಟನೆ ನಡೆದಿದ್ದು, ಮನೆಯಿಂದ ಹೊರ ಹೋಗಿದ್ದ ಬಾಲಕಿಯನ್ನು ಕಾನ್ಸ್‌ಟೇಬಲ್‌ ಎಳೆದೊಯ್ದು ಅತ್ಯಾಚಾರಗೈದಿದ್ದಾನೆ. ಘಟನೆಯ ಬಳಿಕ ಬಾಲಕಿ ಬೊಬ್‌ಬಿಟ್ಟಿದ್ದು ಸಾರ್ವಜನಿಕರು ಸ್ಥಳಕ್ಕಾಗಮಿಸಿದ್ದಾರೆ.

ವಿಷಯ ಕೇಳುತ್ತಿದ್ದಂದೆ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಹೇಯ ಕೃತ್ಯ ಎಸಗಿರುವ ಗೋಪಾಲನಗರ ಹೊರ ಠಾಣೆಯ ಪೇದೆ ಯನ್ನು ತಕ್ಷಣದಿಂದ ಅಮಾನತು ಮಾಡಿ ಎಸ್‌ಪಿ ಆದೇಶ ಹೊರಡಿಸಿದ್ದಾರೆ. ಪೋಕ್ಸೋ ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ.
ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಉತ್ತರಪ್ರದೇಶದಲ್ಲಿ ಕಾನೂನು ಕಾಯಬೇಕಿದ್ದ ಪೊಲೀಸ್‌ ಸಿಬಂದಿಯೇ ಅತ್ಯಾಚಾರ ಎಸಗಿರುವುದು  ಬಿಜೆಪಿ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.

No Comments

Leave A Comment