Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಪೇಜಾವರ ಶ್ರೀಗಳು KMC ಗೆ ದಾಖಲು;ಮುಸ್ಲಿಮರಿಂದ ಪ್ರಾರ್ಥನೆ

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಶ್ರೀಪಾದರು ಭಾನುವಾರ ಹರ್ನಿಯ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಸ್ಪತ್ರೆಯ ಹೊರಗೆ ಪೇಜಾವರ ಬ್ಲಿಡ್‌ ಡೊನೇಟಿಂಗ್‌ ತಂಡದ ಮುಸ್ಲಿಂ ಸದಸ್ಯರು ಶ್ರೀಗಳ ಶೀಘ್ರ ಚೇತರಿಸಿಕೊಳ್ಳಬೇಕು ಎಂದು ವಿಶೇಷ ಪ್ರಾರ್ಥನೆ ನಡೆಸಿದರು.

ವಾರದ ಕಾಲ ಮಠದಲ್ಲಿ ಪೂಜಾ ಕೈಂಕರ್ಯಗಳನ್ನು ಕಿರಿಯ ಶ್ರೀಗಳು ನೆರವೇರಿಸಲಿದ್ದಾರೆ.

ಇದುವರೆಗೆ ಆರೋಗ್ಯ ತಪಾಸಣೆಯನ್ನು ವೈದ್ಯರು ಶ್ರೀಕೃಷ್ಣ ಮಠಕ್ಕೆ ಬಂದು ನಡೆಸುತ್ತಿದ್ದರು. ಸುಮಾರು ಒಂದು ವರ್ಷದಿಂದ 86 ಹರೆಯದ ಶ್ರೀಗಳಿಗೆ ಆರೋಗ್ಯದ ಸಮಸ್ಯೆ ಕಾಣುತ್ತಿತ್ತು. ಪರ್ಯಾಯ ಅವಧಿ ಮುಗಿಯುವವರೆಗೂ ಮುಂದೂಡುವ ಆಲೋಚನೆಯಲ್ಲಿದ್ದರು. ಆರೋಗ್ಯದ ವಿಷಯವಾದ ಕಾರಣ ಇನ್ನಷ್ಟು ಮುಂದೂಡುವುದು ಬೇಡ ಎಂದು ಇತರ ಮಠಾಧೀಶರೂ ಒತ್ತಾಯಿಸಿದ್ದರಿಂದ ಹೆಚ್ಚುವರಿ ತಪಾಸಣೆ, ಶಸ್ತ್ರಚಿಕಿತ್ಸೆಗಾಗಿ ಅವರು ಆಸ್ಪತ್ರೆಗೆ ತೆರಳಲು ಒಪ್ಪಿದರು ಎಂದು ತಿಳಿದುಬಂದಿದೆ.

No Comments

Leave A Comment