Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಚಿಟ್‌ ಫ‌ಂಡ್‌ ಕಂಪನಿಯಿಂದ ಸಂಜನಾಗೆ 28 ಲಕ್ಷ ವಂಚನೆ

ಬೆಂಗಳೂರು: ಮಲ್ಲೇಶ್ವರದ ಪ್ರಸಿದ್ಧಿ ಚಿಟ್‌ಫ‌ಂಡ್‌ ಎಂಬ ಕಂಪೆನಿ ತಮಗೆ 28 ಲಕ್ಷ ರೂ. ವಂಚಿಸಿದೆ ಎಂದು ಆರೋಪಿಸಿ ನಟಿ ಸಂಜನಾ ಗರ್ಲಾನಿ ಮಲ್ಲೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಚಿಟ್‌ಫ‌ಂಡ್‌ ಕಂಪನಿ ಮಾಲೀಕ ಮಹೇಶ್‌ ಮತ್ತು ಪತ್ನಿ ನಿರೂಪಾ ವಿರುದ್ಧ ಸಂಜನಾ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.

ಸಂಜನಾ ಕಳೆದೆರಡು ವರ್ಷಗಳಿಂದ ಪ್ರಸಿದ್ಧಿ ಚಿಟ್‌ ಫಂಡ್‌ನ‌ಲ್ಲಿ ಸುಮಾರು 28 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರು. ಆದರೆ, ಮಹೇಶ್‌ ಎರಡು ತಿಂಗಳಿನಿಂದ ಚಿಟ್‌ ಫಂಡ್‌ ಕಚೇರಿಯನ್ನು ಮುಚ್ಚಿಕೊಂಡು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಟಿ ಸಂಜನಾ ಮಾತ್ರವಲ್ಲದೆ, ಇತರೆ ನೂರಾರು ಮಂದಿಗೂ 18 ಕೋಟಿ ರೂ. ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹತ್ತಾರು ಮಂದಿ ದೂರು ನೀಡಿದ್ದು, ಇದುವರೆಗೂ ಆರೋಪಿಗಳ ವಿರುದ್ಧ 6 ಎಫ್ಐಆರ್‌ ದಾಖಲಾಗಿದೆ. ಆರೋಪಿಗಳು ನೆರೆ ರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ಸಾಧ್ಯತೆಯಿದೆ.

ಶೋಧ ಕಾರ್ಯ ನಡೆಯುತ್ತಿದೆ ಎಂದು ಮಲ್ಲೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಸಹಕಾರ ಜಂಟಿ ನಿಬಂಧಕ ಎಚ್‌.ಬಾಲಶೇಖರ್‌ ಅವರಿಗೂ ದೂರು ನೀಡಿರುವ ನಟಿ ಸಂಜನಾ, ಹಣ ವಾಪಸ್‌ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

No Comments

Leave A Comment