Log In
BREAKING NEWS >
ನಡೆದಾಡುವ ದೇವರು “ಸಿದ್ದಗಂಗಾಶ್ರೀ” ಶಿವೈಕ್ಯ......ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ಮಂಡ್ಯ:ಬೃಹತ್‌ ವೇಶ್ಯಾವಾಟಿಕೆ ಅಡ್ಡೆಗೆ ಎಸ್‌ಪಿ ದಾಳಿ ;22 ಸೆರೆ

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಬೆಂಗಳೂರು -ಮೈಸೂರು ಹೆದ್ದಾರಿಯಲ್ಲಿರುವ ನಗುವನಳ್ಳಿ ಗೇಟ್‌ನ ಡಾಬಾವೊಂದರಲ್ಲಿ ನಡೆಯುತ್ತಿದ್ದ ಭಾರೀ ವೇಶ್ಯಾವಾಟಿಗೆ ಅಡ್ಡೆಯ ಮೇಲೆ ಶನಿವಾರ ತಡರಾತ್ರಿ ಮಂಡ್ಯ ಎಸ್‌ಪಿ ರಾಧಿಕಾ ನೇತೃತ್ವದ ಪೊಲೀಸ್‌ ತಂಡ ದಾಳಿ ನಡೆಸಿ 22 ಮಂದಿಯನ್ನು ಬಂಧಿಸಿದ್ದು, 7 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.

ಕಾರ್ಯಾಚರಣೆ ವೇಳೆ ಮಹಿಳೆಯರನನ್ನು ಅಡಗಿಸಿಡಲುನಿರ್ಮಿಸಲಾಗಿದ್ದ ಸುರಂಗಗಳೂ ಪತ್ತೆಯಾಗಿವೆ. ರಕ್ಷಣೆಗೊಳಗಾದ ಮಹಿಳೆಯರು ಬಾಂಗ್ಲಾ, ಮುಂಬಯಿ ಮತ್ತು ಕೋಲ್ಕತಾ ಮೂಲದವರು ಎಂದು ವರದಿಯಾಗಿದೆ.

ಇದೇ ಡಾಬಾದ ಮೇಲೆ 10 ವರ್ಷದ ಹಿಂದೆ ದಾಳಿ ಮಾಡಲಾಗಿತ್ತಾದರೂ ಕೆಲ ವರ್ಷಗಳಿಂದ ಮತ್ತೆ ಮಾಂಸ ದಂಧೆ ಶುರುವಾಗಿತ್ತು ಎನ್ನಲಾಗಿದೆ. ಸಾರ್ವಜನಿಕರ ದೂರಿನ ಮೇರೆಗೆ ಎಸ್‌ಪಿಯೇ ದಾಳಿಗಿಳಿದಿದ್ದಾರೆ ಎನ್ನಲಾಗಿದೆ.

ಶ್ರೀರಂಗ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

No Comments

Leave A Comment