Log In
BREAKING NEWS >
ವಿಶ್ವಾಸಮತದ ಅಗ್ನಿಪರೀಕ್ಷೆ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್...ಡಯಾನ ಸಮೂಹ ಸ೦ಸ್ಥೆಯ ಪಾಲುದಾರರಾದ ಎ೦.ಯಶವ೦ತ ಪೈ ನಿಧನ...

ಹೈದರಾಬಾದ್‌ :5 ಲಕ್ಷ ನೀಡಿ 16 ವರ್ಷದ ಹುಡುಗಿಯ ವಿವಾಹ; ಒಮನ್ ವರನಿಗೆ 65 ವರ್ಷ

ಹೈದರಾಬಾದ್‌: ಹದಿನಾರು ವರ್ಷದ ಬಾಲಕಿಯನ್ನು ಮದುವೆಯಾಗಿರುವ 65 ವರ್ಷದ ವ್ಯಕ್ತಿ, ಹುಡುಗಿ ಸಂಬಂಧಿಗೆ 5 ಲಕ್ಷ ನೀಡಿ ಆಕೆಯನ್ನು ಒಮನ್‌ಗೆ ಕರೆದುಕೊಂಡು ಹೋಗಿದ್ದಾರೆ. ಈ ಕುರಿತು ನಮಗೆ ತಿಳಿದೇ ಇರಲಿಲ್ಲ ಎಂದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಸ್ಕತ್‌ನಿಂದ ಕರೆ ಮಾಡಿರುವ ಮಗಳು, ‘ನನ್ನನ್ನು ಇಲ್ಲಿಂದ ರಕ್ಷಿಸಿ ಕರೆದುಕೊಂಡು ಹೋಗದಿದ್ದರೆ, ಸತ್ತೇ ಹೋಗುತ್ತೇನೆ.. ’ ಎಂದು ಅಳಲು ತೋಡಿಕೊಂಡಿದ್ದಾಳೆ. ಹುಡುಗಿ ತಂದೆ ಹಾಗೂ ಅತ್ತಿಗೆ ಹಣ ಪಡೆದು ಈ ಮದುವೆ ಮಾಡಿಸಿದ್ದಾರೆ ಎಂದು ಆಕೆಯ ತಾಯಿ ದೂರು ನೀಡಿದ್ದಾರೆ.

‘ಮೂರು ತಿಂಗಳ ಹಿಂದೆ ಮದುವೆ ನಡೆದಿದ್ದು, 5 ಲಕ್ಷ ಕೊಟ್ಟಿರುವ 65 ವರ್ಷದ ಒಮನ್‌ ಪ್ರಜೆ ಮಸ್ಕತ್‌ನಲ್ಲಿ ನೆಲೆಸಿದ್ದಾರೆ. ಹೊಟೇಲ್‌ ಒಂದರಲ್ಲಿ ವಿವಾಹ ನಡೆದಿದ್ದು, ಆತ ಒಮನ್‌ಗೆ ತೆರಳಿ ನಂತರ ವೀಸಾ ಕಳುಹಿಸಿ ಮಗಳನ್ನು ಕರೆಸಿಕೊಂಡರು, ಆಕೆ ಕಷ್ಟ ಅನುಭವಿಸುತ್ತಿದ್ದಾಳೆ. ಮಗಳನ್ನು ಹೈದರಾಬಾದ್‌ ಕಳುಹಿಸುವಂತೆ ಆತನಿಗೆ ಮನವಿ ಮಾಡಿದ್ದೆ, ಹಣ ಕೊಟ್ಟು ನಿಮ್ಮ ಮಗಳನ್ನು ಕೊಂಡುಕೊಂಡಿದ್ದೇನೆ. ಹಣ ವಾಪಸ್‌ ಮಾಡಿದರೆ ಆಕೆಯನ್ನು ಕಳುಹಿಸುವುದಾಗಿ ಹೇಳಿದ್ದಾರೆ’ ಎಂದು ಹುಡುಗಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಹೈದರಾಬಾದ್‌ನಲ್ಲಿ ಈ ರೀತಿಯ ವಿವಾಹಗಳು ಸಾಮಾನ್ಯವಾಗಿದ್ದು, ಲಕ್ಷ–ಲಕ್ಷ ಹಣ ನೀಡಿ ಹೆಚ್ಚು ವಯೋಮಾನದ ವ್ಯಕ್ತಿಗಳು ಕಡಿಮೆ ವಯಸ್ಸಿನ ಹುಡುಗಿಯನ್ನು ಮದುವೆಯಾಗುತ್ತಾರೆ. ಇಂಥ ಸಂದರ್ಭದಲ್ಲಿ ದಿಢೀರ್‌ ಮದುವೆ ಏರ್ಪಡುತ್ತದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

No Comments

Leave A Comment