Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಶೋಭಾ ಭಿಕ್ಷೆ ಬೇಡಬೇಕಾಗಿಲ್ಲ, ಮಡಿಕೇರಿ ಆಸ್ತಿಯಲ್ಲಿ ಒಂದಂಶ ಕೊಡಲಿ: ರೈ

ಮಂಗಳೂರು: ಕಲ್ಲಡ್ಕ ಶ್ರೀರಾಮ ಸಂಸ್ಥೆಗೆ ಅನುದಾನ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿದ್ಯಾರ್ಥಿಗಳ ಊಟಕ್ಕಾಗಿ ಮುಷ್ಠಿ ಅಕ್ಕಿ ಭಿಕ್ಷೆ ಬೇಡುವ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ರಮಾನಾಥ್ ರೈ ತೀವ್ರ ವಾಗ್ದಾಳಿ ನಡೆಸಿ ಸವಾಲು ಹಾಕಿರುವ ಘಟನೆ ಗುರುವಾರ ನಡೆದಿದೆ.

ಮಂಗಳೂರಿನಲ್ಲಿ ಶೋಭಾ ಕರಂದ್ಲಾಜೆ ಮುಷ್ಠಿ ಅಕ್ಕಿ ಭಿಕ್ಷೆ ಬೇಡುವ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಸದೆ ಶೋಭಾ ಕರಂದ್ಲಾಜೆ ಅವರು ಕಲ್ಲಡ್ಕ ಶಾಲಾ ಮಕ್ಕಳಿಗಾಗಿ ಭಿಕ್ಷೆ ಬೇಡಬೇಕಾದ ಅಗತ್ಯವೇ ಇಲ್ಲ. ಯಾಕೆಂದರೆ ಮಡಿಕೇರಿಯಲ್ಲಿರುವ ಆಸ್ತಿಯಲ್ಲಿನ ಒಂದಂಶ ಕೊಟ್ಟರೂ ಸಾಕು, ಮಕ್ಕಳು ಜೀವನ ಪರ್ಯಂತ ಊಟ ಮಾಡಬಹುದು ಎಂದು ತಿರುಗೇಟು ನೀಡಿದ್ದಾರೆ.

ಗತಿ ಗೋತ್ರ ಇಲ್ಲದ ಈ (ಶೋಭಾ) ಹೆಣ್ಣು ಮಗಳು ಹೇಗೆ ಶ್ರೀಮಂತರಾದರು ಎಂಬುದು ಎಲ್ಲರಿಗೂ ಗೊತ್ತಾಗಲಿ, ಹಾಗೆಯೇ ರಮಾನಾಥ ರೈ ಅಪ್ಪನ ಆಸ್ತಿ ಎಷ್ಟಿದೆ, ರಮಾನಾಥ ರೈ ಆಸ್ತಿ ಎಷ್ಟಿದೆ ಎಂಬುದು ಚರ್ಚೆಯಾಗಲಿ ಜೊತೆಗೆ ಶೋಭಾ ಕರಂದ್ಲಾಜೆ ಅಪ್ಪನ ಆಸ್ತಿ ಎಷ್ಟಿದೆ, ಶೋಭಾ ಕರಂದ್ಲಾಜೆ ಆಸ್ತಿ ಎಷ್ಟಿದೆ ಎಂಬುದರ ಬಗ್ಗೆ ಚರ್ಚೆಯಾಗಲಿ ಎಂದು ರೈ ನೇರ ಸವಾಲು ಹಾಕಿದರು.

No Comments

Leave A Comment