Log In
BREAKING NEWS >
ಉಡುಪಿ:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಮಹೋತ್ಸವದ ಶುಭಾರoಭಕ್ಕೆ ಕ್ಷಣಗಣನೆ....ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ;೧೧೮ನೇ ಭಜನಾ ಸಪ್ತಾಹ ಮಹೋತ್ಸವದ 1`ದಿನ ಶ್ರೀದೇವರಿಗೆ ಮತ್ಸ್ಯಲoಕಾರ

ಆತಂಕ ಪಡಬೇಕಿಲ್ಲ; ಜಲಚರಕ್ಕೆ ಹಾನಿಯಿಲ್ಲ ಕಾರವಾರ: ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಹಸಿರು ಬಣ್ಣಕ್ಕೆ ತಿರುಗಿದ ನೀರು

ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರದ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.

ಇಲ್ಲಿನ ಕಡಲ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ.ಶಿವಕುಮಾರ್ ಹರಗಿ ಮತ್ತು ಜಗನ್ನಾಥ್ ರಾಠೋಡ್ ಅವರು ತೀರಕ್ಕೆ ಆಗಮಿಸಿ ನೀರಿನ ಮಾದರಿಯನ್ನು ಸಂಗ್ರಹಿಸಿದರು.

‘ಮಳೆ ಹಾಗೂ ಕೊಳಚೆ ನೀರಿನ ಮೂಲಕ ಖನಿಜಾಂಶ ಹೇರಳವಾಗಿ ಕಡಲಿಗೆ ಸೇರಿದೆ. ಸೂರ್ಯನ ಕಿರಣದಿಂದ ದ್ಯುತಿ ಸಂಶ್ಲೇಷಣೆ ಕ್ರಿಯೆ ನಡೆದು ಅಧಿಕವಾಗಿ ಪಾಚಿ ಬೆಳೆದಿದೆ. ಇದರಿಂದ ನೀರು ಹಸಿರು ಬಣ್ಣದಿಂದ ಕೂಡಿದೆ. ಆದರೆ, ಇದರಿಂದ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಜಲಚರಕ್ಕೂ ಯಾವುದೇ ಹಾನಿಯಿಲ್ಲ’ ಎಂದು ತಿಳಿಸಿದರು.

ನೀರಿನ ಮಾದರಿಯನ್ನು ಕಡಲ ಜೀವವಿಜ್ಞಾನ ವಿಭಾಗದ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ, ಅದರ ವರದಿಯನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಲಾಗುವುದು’ ಎಂದು ಜಗನ್ನಾಥ್ ರಾಥೋಡ್ ತಿಳಿಸಿದರು.

 

No Comments

Leave A Comment