Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಪಶ್ಚಿಮಬಂಗಾಳ ಸ್ಥಳೀಯ ಚುನಾವಣೆ: ಮಮತಾ ಮೇಲುಗೈ, BJP ಪ್ರತಿಪಕ್ಷ!

ಕೋಲ್ಕತಾ: ಆಗಸ್ಟ್ 13ರಂದು ನಡೆದಿದ್ದ 7 ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಕುತೂಹಲಕಾರಿ ಬೆಳವಣಿಗೆ ಎಂಬಂತೆ ಕೆಲವು ವರ್ಷಗಳ ಹಿಂದೆ ಶೂನ್ಯ ಸಾಧನೆಯಲ್ಲಿದ್ದ ಭಾರತೀಯ ಜನತಾ ಪಕ್ಷ ಈ ಬಾರಿ 2ನೇ ಸ್ಥಾನ ಪಡೆದಿದೆ. ಇದೀಗ ಬಿಜೆಪಿ ಪಶ್ಚಿಮಬಂಗಾಳದಲ್ಲಿ ವಿರೋಧ ಪಕ್ಷವಾಗಿದೆ!

ಭಾನುವಾರ ಪಶ್ಚಿಮಬಂಗಾಳದ 5 ಮುನ್ಸಿಪಲ್ ಸೇರಿದಂತೆ 7 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಗುರುವಾರ ಬೆಳಗ್ಗೆ ಮತಎಣಿಕೆ ನಡೆದಿತ್ತು. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಧುಪ್ ಗುರಿ ಮಹಾನಗರ ಪಾಲಿಕೆಯ 16 ಸ್ಥಾನಗಳಲ್ಲಿ 12ರಲ್ಲಿ ಜಯಭೇರಿ ಬಾರಿಸಿದೆ.

ಬುನಿಯಾದ್ ಪುರ್ ನ 14 ವಾರ್ಡ್ ಗಳಲ್ಲಿ ತೃಣಮೂಲ ಕಾಂಗ್ರೆಸ್ 13ರಲ್ಲಿ ಗೆದ್ದಿದೆ. ಕೂಪರ್ಸ್ಸ್ ಕ್ಯಾಂಪ್ ನ 12 ವಾರ್ಡ್ ಗಳಲ್ಲಿ ಟಿಎಂಸಿ ಜಯಭೇರಿ, ದುರ್ಗಾಪುರ್ 43 ವಾರ್ಡ್ ಗಳಲ್ಲಿ 33ರಲ್ಲಿ ಟಿಎಂಸಿ ಗೆಲುವು ಸಾಧಿಸಿದೆ. ಹಾಲ್ಡಿಯಾದ 29 ವಾರ್ಡ್ ಗಳೂ ಟಿಎಂಸಿ ಪಾಲಾಗಿದೆ.

No Comments

Leave A Comment