Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

81 ಲಕ್ಷ ಆಧಾರ್‌ ನಿಷ್ಕ್ರಿಯ;ನಿಮ್ಮ ಆಧಾರ್‌ ಸ್ಥಿತಿಗತಿ ?

ಹೊಸದಿಲ್ಲಿ : ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಈ ದಿನಾಂಕದ ವರೆಗೆ, ವಿವಿಧ  ಕಾರಣಗಳಿಗಾಗಿ, 81 ಲಕ್ಷ ಆಧಾರ್‌ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಿದೆ.

ಆಧಾರ್‌ ಎನ್‌ರೋಲ್‌ಮೆಂಟ್‌ ಆ್ಯಂಡ್‌ ಅಪ್‌ಡೇಟ್‌ ರೆಗ್ಯುಲೇಶನ್ಸ್‌ 2016 ಇದರ ಸೆ.27 ಮತ್ತು ಸೆ.28ರ ಪ್ರಕಾರ ಅಲ್ಲಿ ನಮೂದಿಸಲಾಗಿರುವ ಹಲವಾರು ಕಾರಣಗಳಿಗಾಗಿ ಆಧಾರ್‌ ನಂಬರ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

2016ರ ಆಧಾರ್‌ ಕಾಯಿದೆ ಜಾರಿಗೆ ಮೊದಲು “ಆಧಾರ್‌ ಲೈಫ್ ಸೈಕಲ್‌ ಮ್ಯಾನೇಜ್‌ಮೆಂಟ್‌ (ಎಎಲ್‌ಸಿಎಂ) ಪ್ರಕಾರ ಆಧಾರ್‌ ನಂಬರ್‌ಗಳ ಅಮಾನತು/ನಿಷ್ಕ್ರಿಯತೆಯನ್ನು ಮಾಡಲಾಗುತ್ತಿತ್ತು.

ಆಧಾರ್‌ ಕಾರ್ಡ್‌ದಾರರು ತಮ್ಮ ಆಧಾರ್‌ ಕಾರ್ಡಿನ ಸ್ಥಿತಿಗತಿ ತಿಳಿಯಲು ಯುಐಡಿಎಐ ವೆಬ್‌ಸೈಟ್‌ ಸಂದರ್ಶಿಸಿ “ವೆರಿಫೈ ಆಧಾರ್‌ ನಂಬರ್‌’ ಅನ್ನು ಕ್ಲಿಕ್‌ ಮಾಡಬೇಕು.

ಆಧಾರ್‌ ಪುಟಕ್ಕೆ ಹೋದಾಕ್ಷಣ ಅಲ್ಲಿ 12 ಡಿಜಿಟ್‌ ಆಧಾರ್‌ ನಂಬರ್‌ ಮತ್ತು ಸೆಕ್ಯುರಿಟಿ ಕೋಡ್‌ ಅನ್ನು ಪಂಚ್‌ ಮಾಡಬೇಕು.

ನಿಮ್ಮ ಆಧಾರ್‌ ಕಾರ್ಡ್‌ ಊರ್ಜಿತದಲ್ಲಿದೆಯಾದರೆ ನಿಮಗೆ ಆ ಬಗ್ಗೆ ದೃಢೀಕರಣ ಸಂದೇಶ ಬರುತ್ತದೆ. ಆ ಸಂದೇಶದಲ್ಲಿ ನಿಮ್ಮ ವಯಸ್ಸು, ನಿಮ್ಮ ರಾಜ್ಯ ಮತ್ತು ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯ ಕೊನೆಯ ಮೂರು ಸಂಖ್ಯೆಗಳು ಕಾಣಿಸಿಕೊಳ್ಳುತ್ತವೆ.

ಒಂದೊಮ್ಮೆ ನಿಮ್ಮ ಆಧಾರ್‌ ಅಸಿಂಧುವಾಗಿದ್ದರೆ ಆಗಲೂ ನಿಮಗೆ ಅದನ್ನು ದೃಢೀಕರಿಸುವ ಸಂದೇಶ ಬರುತ್ತದೆ.

No Comments

Leave A Comment