Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಯಾವುದೇ ಭದ್ರತಾ ಸವಾಲು ಎದುರಿಸಲು ಭಾರತ ಸಿದ್ದ; ಪ್ರಧಾನಿ ಮೋದಿ

ಹೊಸದಿಲ್ಲಿ : ನೆಲ, ಜಲ, ವಾಯು ಮಾರ್ಗದ ಮೂಲಕ ಎದುರಾಗಬಲ್ಲ ಯಾವುದೇ ರೀತಿಯ ಭದ್ರತಾ ಸವಾಲುಗಳನ್ನು ಎದುರಿಸಲು ಭಾರತ ಸರ್ವಶಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಚೀನವನ್ನಾಗಲೀ, ಡೋಕ್‌ಲಾಂ ನಲ್ಲಿ ಸಾಗಿರುವ ಉಭಯ ದೇಶಗಳ ಸೇನೆಯ ಮುಖಾಮುಖೀಯನ್ನಾಗಲೀ, ನೇರವಾಗಿ ಪ್ರಸ್ತಾವಿಸದೆ, ಪ್ರಧಾನಿ ಮೋದಿ, ದೇಶದ ಭದ್ರತೆಯು ಸರಕಾರದ ಅದ್ಯತೆಯಾಗಿದೆ; ಅಂತೆಯೇ ಸರಕಾರ ತನ್ನ ಯೋಧರನ್ನು ಪರಿಣಾಮಕಾರಿ ಗಡಿ ರಕ್ಷಣೆಗಾಗಿ ನಿಯೋಜಿಸಿದೆ ಎಂದು ಹೇಳಿದರು.

ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡುತ್ತಾ ಪ್ರಧಾನಿ ಮೋದಿ ಅವರು, ಕಳೆದ ವರ್ಷಸೇನೆ ಕೈಗೊಂಡಿದ್ದ ಸರ್ಜಿಕಲ್‌ ದಾಳಿಯನ್ನು ಉಲ್ಲೇಖೀಸಿ ಇಡಿಯ ವಿಶ್ವವೇ ಭಾರತೀಯ ಸೇನೆಯ ಕ್ಷಮತೆ ಮತ್ತು ತಾಕತ್ತು ಏನೆಂಬುದನ್ನು ಅರಿತುಕೊಂಡಿದೆ ಎಂದು ಹೇಳಿದರು.

No Comments

Leave A Comment