Log In
BREAKING NEWS >
ಜನವರಿ 25ಕ್ಕೆ ಬೆಳಿಗ್ಗೆ 9.30ಕ್ಕೆ ಉಡುಪಿಯ ಟಿ ಎ೦ ಎ ಪೈ ಹಿ೦ಬದಿಯಲ್ಲಿನ ಸ್ಥಳದಲ್ಲಿ ನೂತನ "ನಯಾಬ್ "ವಸತಿ ಸಮುಚ್ಚಾಯದ ಶಿಲಾನ್ಯಾಸ ಜರಗಲಿದೆ

ನಾ ಜನನಾಯಕನೂ ಅಲ್ಲ, ಸೇವಕನೂ ಅಲ್ಲ: ಉಪ್ಪಿ ಸುದ್ದಿಗೋಷ್ಠಿ ಹೈಲೈಟ್ಸ್

ಬೆಂಗಳೂರು: ಜಾತಿ, ಧರ್ಮ, ದುಡ್ಡು, ಫೇಮಸ್ ಇರುವವರಿಗೆ ವೋಟ್ ಹಾಕಲಾಗುತ್ತಿದೆ. ವೋಟ್ ಬ್ಯಾಂಕ್ ರಾಜಕೀಯ ನಮಗೆ ಬೇಕಾಗಿಲ್ಲ. ಜನರ ಜತೆ ಕೆಲಸ ಮಾಡಬೇಕಾದ ಅನಿರ್ವಾಯತೆ ಇದೆ. ಟೆಕ್ನಾಲಜಿ ಇದೆ, ಖಂಡಿತ ನಾವು ಜನರನ್ನು ತಲುಪಬಹುದು. ಸೋಲು, ಗೆಲುವು ಮುಖ್ಯವಲ್ಲ. ಬನ್ನಿ ಎಲ್ಲರೂ ಸೇರಿ ಹೊಸ ಇತಿಹಾಸ ನಿರ್ಮಿಸೋಣ…ಇದು ನಟ, ನಿರ್ದೇಶಕ ಉಪೇಂದ್ರ ಅವರ ನುಡಿ.

ರಾಜಕೀಯ ಪ್ರವೇಶ ಹಿನ್ನೆಲೆಯಲ್ಲಿ ಶನಿವಾರ ಬಿಡದಿಯ ರುಪ್ಪೀಸ್ ರೆಸಾರ್ಟ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮಗೆ ಪ್ರಜಾಕೀಯ, ಪ್ರಜಾಕಾರಣ, ಪ್ರಜಾಪ್ರಭುತ್ವ ಬೇಕಾಗಿದೆ.ಈಗ ಸಮಾವೇಶಗಳನ್ನು ಯಾಕ್ ನಡೆಸುತ್ತಾರೋ ಗೊತ್ತಿಲ್ಲ. ಒಂದು ಕಾಲದಲ್ಲಿ ಇಷ್ಟೊಂದು ಟಿವಿ ಚಾನೆಲ್ ಇರಲಿಲ್ಲ.  ಅಂದು ರಾಲಿ ಮಾಡಿ ಭಾಷಣ ಮಾಡುವ ಪರಿಸ್ಥಿತಿ ಇತ್ತು. ಆದ್ರೆ ಈಗ ರಾಲಿ ಮಾಡಿ ಅದನ್ನೇ ಟಿವಿಯಲ್ಲಿ ನೋಡ್ಬೇಕಾ? ಜಾತಿ, ದುಡ್ಡು, ಹಣ, ಧರ್ಮ ನೋಡಿ ಮತ ಹಾಕ್ಬೇಕಾ?

ರಾಜಕೀಯ ಪಕ್ಷ ಕಟ್ಟಲು ಹಣ ಬೇಕೇ, ಬೇಕು ಎನ್ನುವ ಪರಿಸ್ಥಿತಿ ಇದೆ. ರಾಜಕಾರಣಿಯಾಗಬೇಕಾದರೆ ಮೊದಲು ಅರ್ಹತೆ ಮುಖ್ಯವಾಗಬೇಕಾಗುತ್ತದೆ. ದುಡ್ಡು, ಜಾತಿ ಬಲ ಇಲ್ಲದೆ ಗೆಲ್ಲಲು ಆಗುವುದಿಲ್ಲ ಎನ್ನುತ್ತಿದ್ದಾರೆ. ನಾನು ಕೆಲಸಗಾರ ಅದಕ್ಕಾಗಿ ಖಾಕಿ ಬಟ್ಟೆ ಹಾಕಿಕೊಂಡು ಬಂದಿದ್ದೇನೆ. ನನ್ನ ಪಕ್ಷಕ್ಕೆ ಬರುವವರು, ಸ್ವ ವಿವರ ಕಳುಹಿಸಿ (ಇ ಮೇಲ್ ಐಡಿ: [email protected][email protected][email protected]ನಿಮ್ಮೊಂದಿಗೆ ಚರ್ಚಿಸಿಯೇ ನಾನು ಮುಂದುವರಿಯುತ್ತೇನೆ.

ನಮ್ಮ ದೇಶದಲ್ಲಿ ಇರುವುದು ಪ್ರಜಾಪ್ರಭುತ್ವ ಹಾಗಾಗಿ ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ರಾಜ. ಎಲ್ಲರೂ ಪ್ರತಿವರ್ಷ ಜನರು ಸರ್ಕಾರಕ್ಕೆ ತೆರಿಗೆ ಸಲ್ಲಿಸುತ್ತಾರೆ. ನಮ್ಮ ಬಜೆಟ್ ಆಗೋದೆ ಅದ್ರಿಂದ. . ಜನ ಕೊಡ್ತಿರೋ ತೆರಿಗೆ ಸಮರ್ಪಕವಾಗಿ ಖರ್ಚಾಗಬೇಕು.  ನನ್ನ ಪ್ರಕಾರ ಜನರು ಶ್ರೀಸಾಮಾನ್ಯರಲ್ಲ, ನನ್ನ ಪ್ರಕಾರ ಅಸಾಮಾನ್ಯರು ಎಂದು ವಿಶ್ಲೇಷಿಸಿದರು.

ಹೊಸ ಪಕ್ಷ ಕಟ್ಟಲು ನಿರ್ಧರಿಸಿದ್ದೇನೆ. ಆದರೆ ಹೊಸ ಪಕ್ಷದ ಹೆಸರೇನು? ಅದರ ಚಿಹ್ನೆ ಏನು ಎಂಬುದು ಈಗಲೇ ಹೇಳಲು ಸಾಧ್ಯವಿಲ್ಲ. ಚುನಾವಣಾ ಆಯೋಗಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಅಲ್ಲಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಜನರ ದುಡ್ಡು ಎಲ್ಲೂ ಪೋಲಾಗದೆ ಖರ್ಚಾಗಬೇಕು.  ಅವರಿಗೆ ಕೆಲಸ ಮಾಡುವ ತಾಕತ್ತಿದ್ಯಾ ಅಂತ ನೋಡಿ ಮತ ನೀಡಬೇಕು. ನಮ್ಮ ಮನೆಯಲ್ಲಿ ಕೆಲಸ ಮಾಡುವವರ ಜಾತಿ ನೋಡ್ತೇವಾ? ಅದಕ್ಕಾಗಿ ಸಮರ್ಥರು ಮಾತ್ರ ಶಾಸಕರು, ಸಂಸದರು ಆಗಿ ಆಯ್ಕೆಯಾಗಬೇಕು ಎಂದರು.

ಭ್ರಷ್ಟಾಚಾರವೂ ಬೇಡ, ಹಣವೂ ಬೇಡ:

ಭ್ರಷ್ಟಾಚಾರವೂ ಬೇಡ, ಹಣವೂ ಬೇಡ. ಹಣದಿಂದಲೇ ಭ್ರಷ್ಟಾಚಾರವಾಗುತ್ತೆ. ನಾನು ಕೂಡಾ ಪುಕ್ಸಟ್ಟೆಯಾಗಿ ಮಾಡುತ್ತಿಲ್ಲ, ಸಂಬಳ ಪಡೆದು ಕೆಲಸ ಮಾಡುವ ಕಾರ್ಮಿಕನಾಗುತ್ತೇನೆ. ಆದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ಬೇಡ. ಯಾಕೆಂದರೆ ನಾನೊಂದು ಆಶಾ ಭಾವನೆ ಹೊಂದಿದ್ದೇನೆ. ಹಣ ಸಂಗ್ರಹಿಸಿ ಪಕ್ಷ ಕಟ್ಟಿದ್ರೆ ಏನಾಗುತ್ತೆ, ನಾಳೆ ನಾವು ಜನರಿಗೆ ಹಣ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಜಾತಿ, ಧರ್ಮ, ಹಣ ಇಲ್ಲದೇ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದೇನೆ. ಖಂಡಿತ ನೀವೆಲ್ಲರೂ ಕೈಜೋಡಿಸಿದರೆ ಸಾಧ್ಯ ಎಂಬುದು ನನ್ನ ವಿಶ್ವಾಸ. ನನ್ನಲ್ಲಿ ಹಿಂದಿನಿಂದಲೂ ಇಂಥದ್ದೊಂದು ಕಲ್ಪನೆ ಇತ್ತು.

ಸುದ್ದಿಗೋಷ್ಠಿಯ  ಹೈಲೈಟ್ಸ್

*ಸ್ವ ಇಚ್ಛೆಯಿಂದ ಪ್ರಜಾಕೀಯ ಪಕ್ಷ ಕಟ್ಟುತ್ತಿದ್ದೇನೆ

*ಇ ಮೇಲ್ ಐಡಿಗಳಿಗೆ ನಿಮ್ಮ ಸಲಹೆಗಳನ್ನು ನನಗೆ ಕಳುಹಿಸಿಕೊಡಿ

*ರಾಜಕಾರಣಿಯಾಗಬೇಕಾದರೆ ಮೊದಲು ಅರ್ಹತೆ ಮುಖ್ಯ

*ನಮ್ಮ ದೇಶದಲ್ಲಿ ಇರುವುದು ಪ್ರಜಾಪ್ರಭುತ್ವ

*ಇಂದು ದುಡ್ಡು, ತೋಳ್ಬಲದಿಂದ ರಾಜಕೀಯ ಮಾಡುತ್ತಿದ್ದಾರೆ

*ಕೆಳಮಟ್ಟದಿಂದ ಬದಲಾವಣೆ ತರಬೇಕಾಗಿದೆ

*ಸ್ವಚ್ಛ ಭಾರತದಂತೆ ಸ್ವಚ್ಛ ಆಡಳಿತ ನನ್ನ ಉದ್ದೇಶ

*ನಾನು ನಾಯಕನೂ ಅಲ್ಲ, ಸೇವಕನೂ ಅಲ್ಲ, ನಾನು ಕಾರ್ಮಿಕ

Comments
  • OK prajegal pratinidhiyagi adre yavde party serabedi piz

    August 13, 2017

Leave A Comment