Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಯುದ್ಧಕ್ಕೆ ಸಿದ್ಧವಿದ್ದೇವೆ: ಉತ್ತರ ಕೊರಿಯಾಗೆ ಮತ್ತೆ ಕಠಿಣ ಸಂದೇಶ ರವಾನಿಸಿದ ಟ್ರಂಪ್

ವಾಷಿಂಗ್ಟನ್: ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಪರಮಾಣು ಯುದ್ಧ ನಡೆಯುವ ಸಾಧ್ಯತೆಗಳಿವೆ ಎಂಬ ಭೀತಿಯ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುದ್ಧಕ್ಕೆ ನಾವು ಸಿದ್ಧರಾಗಿದ್ದೇವೆಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಉತ್ತರ ಕೊರಿಯಾದ ಯಾವುದೇ ಪುಂಡಾಟವನ್ನು ಮಟ್ಟಹಾಕುವ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಕೊರಿಯಾ ಬೆದರಿಕೆಗಳ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಉತ್ತರ ಕೊರಿಯಾ ಮೂರ್ಖತನದಿಂದ ನಡೆದುಕೊಂಡಲ್ಲಿ, ಯುದ್ಧಕ್ಕೆ ನಾವು ಸಿದ್ಧರಾಗಿದ್ದೇವೆ. ಈಗಾಗಲೇ ಸೇನೆ  ಕಾರ್ಯಾಚರಣೆಗೆ ಸಂಪೂರ್ಣ ಸಿದ್ಧತೆ ನಡೆದಿದೆ. ಕಿಮ್ ಜೊಂಗ್ ಉನ್ ಈಗ ಬೇರೆ ದಾರಿ ಹಿಡಿಯುತ್ತಾರೆಂಬ ಭರವಸೆ ಹೊಂದಿದ್ದೇನೆಂದು ಹೇಳಿಕೊಂಡಿದ್ದಾರೆ.

ಟ್ರಂಪ್ ಅವರ ಹೇಳಿಕೆ ವ್ಯಾಪಕ ಪ್ರತಿಕ್ರಿಯೆಗಳು ಲಭ್ಯವಾಗಿದ್ದು, ಎರಡೂ ರಾಷ್ಟ್ರಗಳು ವಾಕ್ಸಮರವನ್ನು ನಿಲ್ಲಿಸುವಂತೆ ಚೀನಾ ಕೋರಿಕೊಂಡಿದೆ.

ಉದ್ರೇಕಕಾರಿ ಹೇಳಿಕೆಗಳನ್ನು ನೀಡದಂತೆ ಅಮೆರಿಕ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ, ಲೆಕ್ಕಕ್ಕೆ ತೆಗೆದುಕೊಳ್ಳದ ಉತ್ತರ ಕೊರಿಯಾ ಕೂಡ ತನ್ನ ವಾಗ್ದಾಳಿ ಮುಂದುವರಿಸಿದೆ.

No Comments

Leave A Comment