Log In
BREAKING NEWS >
ಸಮಸ್ತ ಓದುಗರಿಗೆ, ನಮಗೆ ಜಾಹೀರಾತು ನೀಡಿ ಸಹಕರಿಸುತ್ತಿರುವ ಎಲ್ಲಾ ಜಾಹೀರಾತುದಾರರಿಗೆ ಮತ್ತು ನಮ್ಮ ಅಭಿಮಾನಿಗಳಿಗೆ "ಕರಾವಳಿ ಕಿರಣ ಡಾಟ್ ಕಾ೦ ಬಳಗದವತಿಯಿ೦ದ "ಶ್ರೀಗೌರಿ-ಗಣೇಶ "ಹಬ್ಬದ ಶುಭಾಶಯಗಳು

ಎಲ್ಲರೊಳಗೊಂದಾಗು ಮಂಕುತಿಮ್ಮ ಉಸ್ತುವಾರಿ ಸಚಿವರರಿಂದ ನಿಧಿ ಸಂಗ್ರಹಣಾ ಜಾಥಾಗೆ ಚಾಲನೆ

ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ವತಿಯಿಂದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿನೇವಾ ಒಪ್ಪದ ದಿನಾಚರಣೆ ಮತ್ತು ನಿಧಿ ಸಂಗ್ರಹಣಾ ಜಾಥಾ ವನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶನಿವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವರು, ರೆಡ್ ಕ್ರಾಸ್ ಸಂಸ್ಥೆಯು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದ್ದು, ವಿಲಕಚೇತನರಿಗೆ ಅಗತ್ಯ ಸೌಲಭ್ಯಗಳ ವಿತರಣೆ, ನೈಸಗಿಕ ವಿಕೋಪ ಸಂದರ್ಭದಲ್ಲಿ ಸಂತ್ರಸ್ಥರಿಗೆ ಅಗತ್ಯ ಸಹಾಯ, ರಕ್ತದಾನ ಮುಂತಾದ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಈ ಜಾಥಾ ದಲ್ಲಿ ಸಂಗ್ರಹವಾಗುವ ನಿಧಿಯು ಸಮಾಜದ ಒಳಿತಾಗಿ ಹಾಗೂ ದುರ್ಬಲರ ಸಹಾಯಕ್ಕೆ ವಿನಿಯೋಗವಾಗಲಿದೆ , ಕೆಳದ ವರ್ಷದ ಜಾಥಾದಲ್ಲಿ 3.60 ಲಕ್ಷ ಮೊತ್ತ ಸಂಗ್ರಹವಾಗಿದ್ದು, ಈ ವರ್ಷ 4 ಲಕ್ಷ ಸಂಗ್ರಹವಾಗಲಿ ಎಂದು ಸಚಿವರು ಹೇಳಿದರು.

ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದು, ಎಲ್ಲಾ ಕಾಲೇಜುಗಳಿಗೆ ಸಚಿವರು ನಿಧಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ವಿದ್ಯಾರ್ಥಿಗಳು ಜಾಥಾದಲ್ಲಿ ಸಂಚರಿಸುವಾಗ ಎಲ್ಲಾ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಹಾಗೂ ಕಸ ವಿಂಗಡಣೆಯ ಬಗ್ಗೆ ಅರಿವು ಮೂಡಿಸುವುದರ ಮೂಲಕ ಸ್ವಚ್ಚ ಉಡುಪಿ ನಿರ್ಮಾಣದಲ್ಲಿ ಕೈಜೋಡಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಉಡುಪಿ ರೆಡ್ ಕ್ರಾಸ್ ಸಭಾಪತಿ ಡಾ. ಉಮೇಶ್ ಪ್ರಭು,ಕಾರ್ಯದರ್ಶಿ ಜನಾರ್ಧನ್, ಯುವ ರೆಡ್ ಕ್ರಾಸ್ ಚಯರ್ ಮೆನ್ ತಲ್ಲೂರು ಶಿವರಾಮ ಶೆಟ್ಟಿ, ಡಾ.ಜಿ.ಶಂಕರ್ ಸರಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೋ.ಜಗದೀಶ್ ರಾವ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿ ರೆಡ್ ಕ್ರಾಸ್ ಉಪ ಸಭಾಪತಿ ಡಾ. ಅಶೋಕ್ ಕುಮಾರ್ ಸ್ವಾಗತಿಸಿದರು, ಖಜಾಂಜಿ ಡಾ. ರಾಮಚಂದ್ರ ಕಾಮತ್ ವಂದಿಸಿದರು.

No Comments

Leave A Comment