Log In
BREAKING NEWS >
ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಜೆಡಿಯುನಿಂದ ಶರದ್‌ ಉಚ್ಚಾಟನೆ? ರಾಜ್ಯಸಭಾ ಸದಸ್ಯತ್ವಕ್ಕೆ ಸಂಚಕಾರ?

ಹೊಸದಿಲ್ಲಿ : ತನ್ನ ಹಳೇ ಮಿತ್ರ ಬಿಜೆಪಿಯ ಬೆಂಬಲದಲ್ಲಿ ಜೆಡಿಯು ನಾಯಕ ನಿತೀಶ್‌ ಕುಮಾರ್‌ ಹೊಸ ಸರಕಾರವನ್ನು ರಚಿಸಿ ಎರಡು ವಾರ ಆಗುವಷ್ಟರಲ್ಲಿ ಇದೀಗ ಬಿಹಾರ ಇನ್ನೊಂದು ರಾಜಕೀಯ ಬಲ ಪ್ರದರ್ಶನಕ್ಕೆ ಸಜ್ಜಾಗಿದೆ.

ಮೂಲಗಳಿಂದ ತಿಳಿದು ಬಂದಿರುವ ಪ್ರಕಾರ ನಿತೀಶ್‌ ನೇತೃತ್ವದ ಜೆಡಿಯು ಇದೀಗ ಪಕ್ಷದ ಹಿರಿಯ ಸದಸ್ಯ ಶರದ್‌ ಯಾದವ್‌ ಅವರ ವಿರುದ್ಧ ಚಾಟಿ ಬೀಸಲಿದೆ ಮತ್ತು ಅವರಿಂದ ರಾಜ್ಯಸಭಾ ಸದಸ್ಯತ್ವವನ್ನು ಹಿಂಪಡೆಯುವ ಸಿದ್ಧತೆಯಲ್ಲಿದೆ.

ಶರದ್‌ ಯಾದವ್‌ ಅವರು ಒಂದೊಮ್ಮೆ ತಾನೇ ತನ್ನ ಸ್ಥಾನವನ್ನು ಬಿಟ್ಟುಕೊಡದಿದ್ದಲ್ಲಿ ಅವರನ್ನು ಪಕ್ಷದಿಂದಲೇ ಉಚ್ಚಾಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಯಾದವ್‌ ಅವರು ತಾನು ಇದೇ ಆ.10ರಿಂದ 12ರ ತನಕ, ಬಿಹಾರದ 10 ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ಜೆಡಿಯು ಮತ್ತು ಆರ್‌ಜೆಡಿ ಮಹಾಘಟಬಂಧನದಿಂದ ಹಿಂದೆಗೆದುಕೊಂಡಿರುವುದರ ಪರಿಣಾಮಗಳನ್ನು ಜನರೊಡನೆ ಸುವುದಾಗಿ ಪ್ರಕಟಿಸಿದ್ದರು.

ನಿನ್ನೆ ಬುಧವಾರ ಬೆಳಗ್ಗೆ ಶರದ್‌ ಯಾದವ್‌ ಅವರು, ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಅವರನ್ನು ಅಭಿನಂದಿಸಿದ್ದರು.

ಯಾದವ್‌ ಅವರು ಈಚೆಗೆ “ನನ್ನ ಪ್ರಾಣಕ್ಕೆ ಅಪಾಯವಿದೆ’ ಎಂದು ಹೇಳಿಕೊಂಡಿದ್ದರು. ನಿತೀಶ್‌ ಮತ್ತು ಯಾದವ್‌ ಬೇರ್ಪಡುತ್ತಾರೆಂಬ ವದಂತಿಗಳು ಈಚೆಗೆ ಜೋರಾಗಿ ಹಬ್ಬಿಕೊಂಡಿದ್ದವು.

No Comments

Leave A Comment