Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

55ರ ಹರೆಯದ ಮಹಿಳೆ ಮೇಲೆ ರೇಪ್‌, ಕತ್ತು ಹಿಸುಕಿ ಕೊಲೆ

ಮುಜಫ‌ರನಗರ : ಇಲ್ಲಿನ ಗ್ರಾಮವೊಂದರಲ್ಲಿ 55 ವರ್ಷ ಪ್ರಾಯದ ಮಹಿಳೆಯೋರ್ವರ ಮೇಲೆ ಅತ್ಯಾಚಾರ ನಡೆಸಿ ಆಕೆಯ  ಕತ್ತು ಹಿಸುಕಿ ಕೊಂದ ಅಮಾನುಷ ಘಟನೆ ನಡೆದಿದೆ.

ಅತ್ಯಾಚಾರಕ್ಕೆ ಗುರಿಯಾಗಿ ಕೊಲೆಗೀಡಾದ ಮಹಿಳೆಯ ಶವ ಗ್ರಾಮದಲ್ಲಿನ ಹೊಲದಲ್ಲಿ  ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸ್‌ ತನಿಖೆ ನಡೆಯುತ್ತಿದೆ.

ಇನ್ನೊಂದು ಪ್ರಕರಣದಲ್ಲಿ  20ರಿಂದ 30 ವರ್ಷ ಪ್ರಾಯದೊಳಗಿನ ತರುಣನೋರ್ವನನ್ನು ಮುಥ ಭಾರ್‌ ಗ್ರಾಮದಲ್ಲಿ ಗುಂಡಿಟ್ಟು ಸಾಯಿಸಲಾಗಿರುವುದು ವರದಿಯಾಗಿದೆ.

ಮೂರು ಗುಂಡೇಟಿನ ಗಾಯ ಹೊಂದಿದ್ದ ಯುವಕನ ಶವವು ಭೂತಕಾಲ್‌ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ಪತ್ತೆಯಾಯಿತು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment