Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಕ್ಯಾನ್ಸರ್‌ ಪೀಡಿತ, ಪೀಪ್ಲಿ ಲೈವ್‌ ನಟ ಸೀತಾರಾಮ್‌ ಪಾಂಚಾಲ್‌ ವಿಧಿವಶ

ಹೊಸದಿಲ್ಲಿ : ಕಳೆದ ಮೂರು ವರ್ಷಗಳಿಂದ ಶ್ವಾಸಕೋಶ ಮತ್ತು ಮೂತ್ರಪಿಂಡದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ “ಪೀಪ್ಲಿ ಲೈವ್‌’ ಚಿತ್ರದ ಮೂಲಕ ಪ್ರಸಿದ್ದಿಗೆ ಬಂದಿದ್ದ ನಟ, ಸೀತಾರಾಮ ಪಾಂಚಾಲ್‌ ಅವರು ಇಂದು ಗುರುವಾರ ಬೆಳಗ್ಗೆ ತಮ್ಮ 54ರ ಹರೆಯದಲ್ಲಿ ನಿಧನ ಹೊಂದಿದ್ದಾರೆ.

ಪಾಂಚಾಲ್‌ ನಿಧನ ಹೊಂದಿರುವುದನ್ನು ಅವರ ನಿಕಟ ಸಂಬಂಧಿಯೋರ್ವರು ದೃಢೀಕರಿಸಿದ್ದಾರೆ.

ಮೊನ್ನೆ ಸೋಮವಾರವಷ್ಟೇ ಪಾಂಚಾಲ್‌ ಅವರು ಫೇಸ್‌ ಬುಕ್‌ನಲ್ಲಿ “ಕ್ಯಾನ್ಸರ್‌ ಉಲ್ಬಣಿಸುತ್ತಿದೆ; ಸ್ನೇಹಿತರೇ ನೆರವಾಗಿ, ನಿಮ್ಮ ಕಲಾಕಾರ್‌ ಭಾಯಿ ಸೀತಾರಾಮ್‌ ಪಾಂಚಾಲ್‌’ ಎಂಬ ಬರಹವನ್ನು ಪೋಸ್ಟ್‌ ಮಾಡಿದ್ದರು.

ಸೀತಾರಾಮ್‌ ಪಾಂಚಾಲ್‌ ಅವರ ಮೊತ್ತ ಮೊದಲ ನಟನೆಯ ಚಿತ್ರ 1994ರಲ್ಲಿ ತೆರೆಕಂಡಿದ್ದ ಬ್ಯಾಂಡಿಟ್‌ ಕ್ವೀನ್‌. ಅನಂತರದಲ್ಲಿ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದು ಅವುಗಳಲ್ಲಿ ಪಾನ್‌ ಸಿಂಗ್‌ ತೋಮರ್‌, ದ ಲೆಜೆಂಡ್‌ ಆಫ್ ಭಗತ್‌ ಸಿಂಗ್‌, ಸ್ಲಂ ಡಾಗ್‌ ಮಿಲಿಯನೇರ್‌ ಮುಖ್ಯವಾಗಿವೆ.

No Comments

Leave A Comment