Log In
BREAKING NEWS >
ಶಿರಾ ಲಾರಿ -ಬಸ್ಸು ಭೀಕರ ರಸ್ತೆ ಅಪಘಾತ 7 ಮಂದಿ ದುರ್ಮರಣ......ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಇಂಧನ ದರ-ಪೆಟ್ರೋಲ್‌, ಡೀಸೆಲ್‌ ದರ ಗರಿಷ್ಠ ಮಟ್ಟಕ್ಕೆ

ಮುಂಬಯಿ:16 ಸೊಮಾಲಿಯನ್‌ ಕಡಲ್ಗಳ್ಳರಿಗೆ 7ವರ್ಷ ಜೈಲು

ಮುಂಬಯಿ: 6 ವರ್ಷದ ಹಿಂದೆ ಮೀನುಗಾರಿಕಾ ಬೋಟ್‌ ಒಂದನ್ನು  ಇರಾನ್‌ನಲ್ಲಿ ಅಪಹರಿಸಿ ಇರಾನ್‌ ಮತ್ತು ಪಾಕಿಸ್ಥಾನದ  ಮೀನುಗಾರರನ್ನು ಒತ್ತೆಸೆರೆಯಲ್ಲಿರಿಸಿದ ಪ್ರಕರಣಕ್ಕೆ  ಸಂಬಂಧಿಸಿದಂತೆ  ನಗರದ  ಸೆಷನ್ಸ್‌  ನ್ಯಾಯಾಲಯವೊಂದು 16 ಮಂದಿ ಸೊಮಾಲಿಯನ್‌ ಕಡಲ್ಗಳ್ಳರಿಗೆ  ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

2011ರಲ್ಲಿ  ನಡೆದಿದ್ದ ಈ ಪ್ರಕರಣದ ವಿಚಾರಣೆ ನಡೆಸಿದ  ಸೆಷನ್ಸ್‌ ನ್ಯಾಯಾಧೀಶರಾದ  ಜೆ.ಸಿ.ಜಗದಾಳೆ ಅವರು  ಒಳಸಂಚು, ಕೊಲೆ ಯತ್ನ, ಅಪಹರಣ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ  ಈ 16ಮಂದಿ ಆರೋಪಿಗಳನ್ನು  ದೋಷಿಗಳೆಂದು ತೀರ್ಪಿತ್ತರಲ್ಲದೆ ಪ್ರತಿಯೋರ್ವರಿಗೂ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದರು ಎಂದು  ವಿಶೇಷ  ಪಬ್ಲಿಕ್‌ ಪ್ರಾಸಿಕ್ಯೂಟರ್‌  ರಂಜಿತ್‌ ಸಾಂಗ್ಲೆ ತಿಳಿಸಿದರು.

ಅಲ್ಲದೆ  ಪ್ರತಿಯೋರ್ವ ದೋಷಿಗೂ ತಲಾ 14,000ರೂ.ಗಳ ದಂಡವನ್ನು ವಿಧಿಸಿದ ನ್ಯಾಯಾಧೀಶರು  ಅಪರಾಧಿಗಳು ಜೈಲು ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ ಬಳಿಕ ಅವರನ್ನು ಸೊಮಾಲಿಯಾಕ್ಕೆ  ಗಡೀಪಾರು ಮಾಡುವಂತೆ ಸರಕಾರಕ್ಕೆ ನಿರ್ದೇಶ ನೀಡಿದರು.

ಇದೇ ವೇಳೆ  ನ್ಯಾಯಾಧೀಶರು  ಒತ್ತೆ ಹಣಕ್ಕಾಗಿ ಅಪಹರಣ, ಕೊಲೆ  ಮತ್ತು ಶಸ್ತ್ರಾಸ್ತ್ರ  ಕಾಯಿದೆಯಡಿ  ಹೊರಿಸಲಾಗಿದ್ದ  ಆರೋಪಗಳಿಂದ ಇವರನ್ನು  ದೋಷಮುಕ್ತಿಗೊಳಿಸಿತು. 16ಮಂದಿ ಪೈಕಿ ಓರ್ವಾತ  ವಿಚಾರಣೆಯ ಸಂದರ್ಭದಲ್ಲಿ ಸಾವನ್ನಪ್ಪಿದ್ದನು.

No Comments

Leave A Comment