Log In
BREAKING NEWS >
ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಮುಂದುವರೆಸಲು ಸರ್ಕಾರ ನಿರ್ಧಾರ: ಭದ್ರತಾ ಸಂಸ್ಥೆಗಳ ವಿರೋಧ....

ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರ ಆರ್‌ಟಿಪಿಎಸ್‌ನಲ್ಲಿ ಟ್ಯೂಬ್‌ ಸ್ಫೋಟ: ಮಹಿಳಾ ಎಂಜಿನಿಯರ್‌ ಸೇರಿ ಇಬ್ಬರಿಗೆ ಗಾಯ

ರಾಯಚೂರು: ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರ (ಆರ್‌ಟಿಪಿಎಸ್‌) 1 ನೇ ಘಟಕದಲ್ಲಿ ಬಿಸಿ ನೀರಿನ ಟ್ಯೂಬ್‌ ಸ್ಫೋಟಗೊಂಡು ಮಹಿಳಾ ಎಂಜಿನಿಯರ್‌ ಸೇರಿ ಇಬ್ಬರು ಗಾಯಗೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಎಂಜಿನಿಯರ್‌ ರಾಜಶ್ರೀ ಪಿಸ್ಸೆ ಹಾಗೂ ಹೊರಗುತ್ತಿಗೆ ನೌಕರ ಶ್ರೀಕಾಂತ ಘಟನೆಯಲ್ಲಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಶಕ್ತಿನಗರದ ಕೆಪಿಸಿಎಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯೂಬ್‌ನಲ್ಲಿ ಸಣ್ಣ ಪ್ರಮಾಣದ ಸೋರಿಕೆ ಕಂಡು ಬಂದಿತ್ತು.

ಸ್ಥಳಕ್ಕೆ ಪರಿಶೀಲಿಸಲು ಹೋಗಿದ್ದ ವೇಳೆ ಅದು ಸ್ಫೋಟಗೊಂಡಿದ್ದು, ಕೈಗಳು ಹಾಗೂ ಕಾಲುಗಳಿಗೆ ಬಿಸಿ ನೀರು ತಗುಲಿ ಸುಟ್ಟ ಗಾಯಗಳಾಗಿವೆ ಎಂದು ತಿಳಿಸಲಾಗಿದೆ.

No Comments

Leave A Comment