Log In
BREAKING NEWS >
ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

‘ಭಾರತ ಬಿಟ್ಟು ತೊಲಗಿ’ ಚಳುವಳಿಗೆ 75 ವರ್ಷ: ನವ ಭಾರತ ನಿರ್ಮಾಣಕ್ಕೆ ಪ್ರಧಾನಿ ಮೋದಿ ಕರೆ

ನವದೆಹಲಿ: ಭ್ರಷ್ಟಾಚಾರ, ಬಡತನ, ಬಡತನ, ಜಾತೀಯತೆ ಮತ್ತು ಕೋಮುವಾದದಿಂದ ಮುಕ್ತಗೊಳಿಸಿ 2022ರ ವೇಳೆ ಭಾತವನ್ನು ‘ನವ ಭಾರತ’ವನ್ನಾಗಿ ನಿರ್ಮಾಣ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಕರೆ ನೀಡಿದ್ದಾರೆ.

ಬ್ರಿಟೀಷರ ವಿರುದ್ಧ ನಡೆಸಲಾಗಿದ್ದ ‘ಭಾರತ ಬಿಟ್ಟು ತೊಲಗಿ’ ಚಳುವಳಿಗೆ 75 ವರ್ಷವಾಗಿರುವ ಹಿನ್ನಲೆಯಲ್ಲಿ ದೇಶಕ್ಕಾಗಿ ಹೋರಾಟಿದ ನಾಯಕರನ್ನು ಸ್ಮರಿಸಿರುವ ಅವರು, ನಾಯಕರ ತ್ಯಾಗ ಶ್ಲಾಘಿಸಿ ಲೋಕಸಭೆಯಲ್ಲಿ ಮಾತನಾಡಿದ್ದಾರೆ.

ಐತಿಹಾಸಿಕ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ಭಾಗಿಯಾದ ಎಲ್ಲಾ ಮಹಾತ್ಮರಿಗೆ ಸೆಲ್ಯೂಟ್ ಹೊಡೆದಿರುವ ಅವರು, 2022ರ ವೇಳೆ ಕೋಮುವಾದ, ಭ್ರಷ್ಟಾಚಾರ, ಉಗ್ರವಾದಗಳಿಂದ ಮುಕ್ತಗೊಳಿಸಿ ನವ ಭಾರತ ನಿರ್ಮಾಣ ಮಾಡಬೇಕಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಸರಕು ಮತ್ತು ಸೇವಾ ತೆರಿಗೆ ಕುರಿತಂತೆ ಮಾತನಾಡಿರುವ ಅವರು, ಜಿಎಸ್ ಟಿ ಕುರಿತಂತೆ ನಾವು ನಿರ್ಧಾರ ಕೈಗೊಳ್ಳಬಲ್ಲೆವು ಎಂಬುದಾದರೆ, ನಾವು ಎನನ್ನು ಬೇಕಾದರೂ ಮಾಡಬಹುದು. ಜಿಎಸ್ ಟಿ ಯಶಸ್ವಿ ಸರ್ಕಾರದ್ದಾಗಲೀ ಅಥವಾ ರಾಜಕೀಯ ಪಕ್ಷದ್ದಾಗಲೀ ಅಲ್ಲ. ಇಡೀ ದೇಶದ ದೇಶದ ಯಶಸ್ವಿಯಾಗಿದೆ. ಇದೀಗ ಇಡೀ ವಿಶ್ವವೇ ಈ ಬಗ್ಗೆ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದೆ.

ಕಾನೂನನ್ನು ಕಡೆಗಣಿಸದೆಯೇ ಕೆಲ ಸಣ್ಣ ವಿಚಾರ ಹಾಗೂ ಕೆಲಸಗಳನ್ನು ನಾವು ಮಾಡಬಹುದಾಗಿದೆ. ಭ್ರಷ್ಟಾಚಾರ ಎಂಬ ಪಿಡುಗು ಇಂದು ನಮ್ಮ ದೇಶದ ಅಭಿವೃದ್ಧಿಯೆಂಬ ಪ್ರಯಾಣದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತಿದೆ. ಈ ವಿಚಾರ ಸಂಬಂಧ ನಾವು ಧನಾತ್ಮಕ ಬದಲಾವಣೆಗಳನ್ನು ತರಬೇಕಾಗಿದೆ.

ಬಡತನ, ಶಿಕ್ಷಣ ಕೊರತೆ ಮತ್ತು ಅಪೌಷ್ಟಿಕತ ದೇಶಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ವಿಚಾರದಲ್ಲಿಯೂ ನಾವು ಧನಾತ್ಮಕ ಬದಲಾವಣೆಗಳನ್ನು ತರಬೇಕಿದೆ. ಭಾರತದ ಅಭಿವೃದ್ಧಿಯಲ್ಲಿ ಮಹಿಳೆಯರೂ ಕೂಡ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಮಹಿಳೆಯನ್ನು ನಾವು ಪ್ರೋತ್ಸಾಹಿಸಬೇಕಿದೆ ಎಂದಿದ್ದಾರೆ.

ಇದೇ ವೇಳೆ ಭಾರತ ಬಿಟ್ಟು ತೊಲಗಿ ಚಳುವಳಿ ಕುರಿತಂತೆ ಮಾತನಾಡಿದ ಅವರು, ನಮ್ಮ ಸ್ವಾತಂತ್ರ್ಯ ಕೇವಲ ದೇಶಕ್ಕಾಗಿ ಮಾತ್ರವೇ ಅಲ್ಲ. ವಿಶ್ವದ ಇತರ ಭಾಗಗಳಲ್ಲಿಯೂ ವಸಾಹತುಶಾಹಿತ್ವವನ್ನು ಅಂತ್ಯಗೊಳಿಸಲು ನಿರ್ಣಾಯಕ ಕ್ಷಣವಾಗಿದೆ. ನಮ್ಮ ಯುವ ಪೀಳಿಗೆ ಭಾರತ ಬಿಟ್ಟು ತೊಲಗಿಯಂತಹ ಐತಿಹಾಸಿಕ ಚಳುವಳಿಗಳ ಬಗ್ಗೆ ತಿಳಿದುಕೊಳ್ಳಬೇಕಿದೆ. ಭಾರತವನ್ನು ದುಷ್ಟ ಶಕ್ತಿಗಳಿಂದ ಮುಕ್ತ ಮಾಡಬೇಕಿದೆ. ಇದಕ್ಕಾಗಿ ಹೆಗಲಿಗೆ ಹೆಗಲು ಕೊಟ್ಟು ನವ ಭಾರತ ನಿರ್ಮಾಣ ಮಾಡಲು ದೇಶದ ಎಲ್ಲಾ ಜನರು ಶ್ರಮಿಸಬೇಕಿದೆ.

ಮಹಾತ್ಮಾ ಗಾಂಧೀಜಿಯವರು ಭಾರತ ಬಿಟ್ಟು ತೊಲಗಿ ಚಳುವಳಿಯ ನೇತೃತ್ವ ವಹಿಸಿ ಮುಂದಕ್ಕೆ ತೆಗೆದುಕೊಂಡು ಹೋಗಿದ್ದರಿಂದ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ. ಜೊತೆಗೆ ಗಾಂಧೀಜಿಯವರಿಗೆ ಇಡೀ ದೇಶದ ಒನರು ಒಟ್ಟಾಗಿ ಸಥ್ ನೀಡಿದ್ದರು. ಇದೊಂದು ವಿಶೇಷವಾದ ಸಂದರ್ಭವಾಗಿದ್ದು, ಭಾರತ ಬಿಟ್ಟು ಚಳುವಳಿ ದಿನವನ್ನು ನಾವು ಇಂದು ಸ್ಮರಿಸುತ್ತಿದ್ದೇವೆ. ದೇಶಕ್ಕೆ ಶಕ್ತಿಯನ್ನು ಕೊಟ್ಟ ಚಳುವಳಿಯನ್ನು ನೆನೆಯುತ್ತಿದ್ದೇವೆಂದು ತಿಳಿಸಿದ್ದಾರೆ.

No Comments

Leave A Comment