Log In
BREAKING NEWS >
ಗೋಶಾಲೆಯಲ್ಲಿ 200 ಹಸುಗಳ ಸಾವು ಪ್ರಕರಣ: ಬಿಜೆಪಿ ಮುಖಂಡ ಬಂಧನ....ಉಗ್ರರು ಒಳ ನಸುಳಿರುವ ಶಂಕೆ: ಶೋಪಿಯಾನ್ ಜಿಲ್ಲೆಯ 9 ಗ್ರಾಮಗಳಲ್ಲಿ ತೀವ್ರ ಸೇನಾ ಶೋಧ....

ಸಿರಿಯಾದ ರಕ್ಕಾದಲ್ಲಿ ಅಮೆರಿಕ ಸೇನೆ ವೈಮಾನಿಕ ದಾಳಿ: 43 ನಾಗರಿಕರ ಸಾವು

ಡಮಾಸ್ಕಸ್: ಅಮೆರಿಕ ಸೇನೆ ಸಿರಿಯಾದ ರಕ್ಕಾದಲ್ಲಿ ವೈಮಾನಿಕ ದಾಳಿ ನಡೆಸಿದ್ದು ಪರಿಣಾಮ 43 ನಾಗರೀಕರು ಸಾವನ್ನಪ್ಪಿರುವುದಾಗಿ ಎಂದು ವರದಿಯಾಗಿದೆ.

ರಕ್ಕದಾ ಜನವಸತಿ ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಅಮೆರಿಕ ಸೇನೆ ವೈಮಾನಿಕ ದಾಳಿ ನಡೆಸಿದ್ದರಿಂದ ಹಲವರು ಮೃತಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ಕ್ಸಿನ್ಹು ವರದಿ ಮಾಡಿದೆ.

ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ನಿರ್ಮೂಲನೆಗಾಗಿ ಅಮೆರಿಕ ಸೇನೆ 2014ರಿಂದ ವೈಮಾನಿಕ ದಾಳಿಗಳನ್ನು ನಡೆಸುತ್ತಿದೆ. ಆದರೆ ಅಮೆರಿಕ ದಾಳಿಯಿಂದಾಗಿ ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ ಎಂದು ಸಿರಿಯಾ ವಿದೇಶಾಂಗ ಸಚಿವಾಲಯವು ವಿಶ್ವಸಂಸ್ಥೆಗೆ ಮನವಿ ಮಾಡಿ ಅಮೆರಿಕ ನೇತೃತ್ವದ ವೈಮಾನಿಕ ದಾಳಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿತ್ತು.

No Comments

Leave A Comment