Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ನಟ ದಿಲೀಪ್‌ ಕುಮಾರ್‌ ಕಿಡ್ನಿ ವೈಫ‌ಲ್ಯ; ಐಸಿಯುಗೆ ದಾಖಲು

ಮುಂಬಯಿ : ದೇಹದಲ್ಲಿ ನೀರಿನ ಕೊರತೆ ಮತ್ತು ಮೂತ್ರನಾಳದ ಸೋಂಕಿನಿಂದ ಅಸ್ವಸ್ಥರಾಗಿ ನಗರದ ಹೊರವಲಯದ ಬಾಂದ್ರಾದಲ್ಲಿನ ಲೀಲಾವತಿ ಆಸ್ಪತ್ರೆಗೆ  ಬುಧವಾರ ದಾಖಲಾಗಿದ್ದ 94ರ ಹರೆಯದ ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್‌ ಕುಮಾರ್‌ ಅವರ ದೇಹಾರೋಗ್ಯ ಇದೀಗ ಕೊಂಚ ಬಿಗಡಾಯಿಸಿದ್ದು ಅವರನ್ನು ಐಸಿಯುಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.

ದಿಲೀಪ್‌ ಕುಮಾರ್‌ ಅವರಿಗೆ ಕಿಡ್ನಿ ತೊಂದರೆಗಳು ಕಾಣಿಸಿಕೊಂಡಿವೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ವೈದ್ಯರು ಹೇಳುವ ಪ್ರಕಾರ, ದಿಲೀಪ್‌ ಕುಮಾರ್‌ ಅವರ ರಕ್ತದಲ್ಲಿನ ಕ್ರೀಟಿನೈನ್‌ ಮಟ್ಟ ಹೆಚ್ಚುತ್ತಿದೆ. ಪರಿಣಾಮವಾಗಿ ಕಿಡ್ನಿ ವೈಫ‌ಲ್ಯ ಕಾಣಿಸಿಕೊಂಡಿದೆ. ಅವರ ವಯಸ್ಸಿನ ದೃಷ್ಟಿಯಿಂದ ಹೇಳುವುದಾದರೆ ಇದು ಗಂಭೀರ ಪರಿಸ್ಥಿತಿಯಾಗಿದೆ.

No Comments

Leave A Comment