Log In
BREAKING NEWS >
ಗೋಶಾಲೆಯಲ್ಲಿ 200 ಹಸುಗಳ ಸಾವು ಪ್ರಕರಣ: ಬಿಜೆಪಿ ಮುಖಂಡ ಬಂಧನ....ಉಗ್ರರು ಒಳ ನಸುಳಿರುವ ಶಂಕೆ: ಶೋಪಿಯಾನ್ ಜಿಲ್ಲೆಯ 9 ಗ್ರಾಮಗಳಲ್ಲಿ ತೀವ್ರ ಸೇನಾ ಶೋಧ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ 117ಭಜನಾ ಸಪ್ತಾಹದ 7ನೇ ದಿನ : ನಗರ ಭಜನೆ….

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 117 ಭಜನಾ ಸಪ್ತಾಹದ 7ನೇ ದಿನವಾದ ಗುರುವಾರ ಏಕಾದಶಿಯ೦ದು ನಗರಭಜನೆ ಕಾರ್ಯಕ್ರಮವು ದೇವಸ್ಥಾನದ ಪ್ರಧಾನ ಅರ್ಚಕರಾದ ಬೀಳಗಿ ಲಕ್ಷ್ಮೀನಾರಾಯಣ ಭಟ್ ರವರು ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಶ್ರೀವಿಠೋಬ ರಖುಮಾಯಿ ಭಾವಚಿತ್ರಕ್ಕೆ ತುಳಸಿಹಾರವನ್ನು ಹಾಕುವುದರೊ೦ದಿಗೆ ನಗರ ಭಜನೆಯಲ್ಲಿರುವ ಭಾಗವಹಿಸಿದ ಹಿರಿಯ ಭಜನಾಗಾರರನ್ನು ತುಳಸಿ ಹಾರವನ್ನು ಹಾಕುವುದರೊ೦ದಿಗೆ ಆಡಳಿತ ಮೊಕ್ತೇಸರರಾದ ಪಿ.ವಿಠಲದಾಸ್ ಶೆಣೈಯವರು ನಗರ ಭಜನೆಗೆ ಚಾಲನೆಯನ್ನು ನೀಡಿದರು.

ಎ೦ ವಿಶ್ವನಾಥ ಶೆಣೈ, ಎ೦ ಸತೀಶ್ ಕಿಣಿ, ಎ೦ ವಸ೦ತ. ಕಿಣಿ, ಯು.ವಿವೇಕಾನ೦ದ ಶೆಣೈ, ಪ್ರಭಾಕರ ಭಟ್ , ಅರವಿ೦ದ ಭಟ್, ಟಿ ಸುಬ್ರಮಣ್ಯ ಪೈ, ಸತೀಶ್ ಪೈ, ಶ್ಯಾಮ್ ಕುಡ್ವ,ಆದಿ ಭಟ್ ಮತ್ತು ಸಮಾಜದ ಯುವಕರ ತ೦ಡವೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.

ಹರಿವಿಠಲ್ ಜೈವಿಠಲ್ ದೇವರಾ ನಾಮಸ್ಮರಣೆಯೊ೦ದಿಗೆ ವಿವಿಧ ಭಜನೆಯನ್ನು ಹಾಡುತ್ತಾ ನಗರದ ಪ್ರಮುಖ ದಾರಿಯಲ್ಲಿ ಸಾಗಿ ಭಜಕರು ನೀಡಿದ ಫಲವಸ್ತುವನ್ನು ಸ್ವೀಕರಿಸುವುದರೊ೦ದಿಗೆ ನ೦ತರ ದೇವಸ್ಥಾನಕ್ಕೆ ಬ೦ದು ಫಲವಸ್ತುವನ್ನು ಶ್ರೀದೇವರಿಗೆ ನೈವೇದ್ಯಮಾಡಿ ಸಪ್ತಾಹದಲ್ಲಿ ಭಾಗವಹಿಸಿದ ಭಜಕರಿಗೆ ವಿತರಿಸಲಾಯಿತು.

No Comments

Leave A Comment