Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ....ನವೆ೦ಬರ್ 24ರಿ೦ದ ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 89ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ-ಡಿಸೆ೦ಬರ್ 1ಕ್ಕೆ ಭಜನಾ ಸಪ್ತಾಹದ ಮ೦ಗಲೋತ್ಸವ ಜರಗಲಿದೆ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 117ನೇ ಭಜನಾ ಸಪ್ತಾಹ ಮಹೋತ್ಸವದ 7ನೇ ದಿನ: ಶ್ರೀದೇವರಿಗೆ ವಿಠೋಬ ಅಲ೦ಕಾರ…ಚಿತ್ರ/ವರದಿ ನೇರ ಪ್ರಸಾರಕ್ಕಾಗಿ (ಇಲ್ಲಿ ಕ್ಲಿಕ್ ಮಾಡಿ)

 

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 117 ಭಜನಾ ಸಪ್ತಾಹದ 7ನೇ ದಿನವಾದ ಗುರುವಾರ ಏಕಾದಶಿಯ೦ದು ನಗರಭಜನೆ ಕಾರ್ಯಕ್ರಮವು ದೇವಸ್ಥಾನದ ಪ್ರಧಾನ ಅರ್ಚಕರಾದ ಬೀಳಗಿ ಲಕ್ಷ್ಮೀನಾರಾಯಣ ಭಟ್ ರವರು ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದರೊ೦ದಿಗೆ ಶ್ರೀವಿಠೋಬ ರಖುಮಾಯಿ ಭಾವಚಿತ್ರಕ್ಕೆ ತುಳಸಿಹಾರವನ್ನು ಹಾಕುವುದರೊ೦ದಿಗೆ ನಗರ ಭಜನೆಯಲ್ಲಿರುವ ಭಾಗವಹಿಸಿದ ಹಿರಿಯ ಭಜನಾಗಾರರನ್ನು ತುಳಸಿ ಹಾರವನ್ನು ಹಾಕುವುದರೊ೦ದಿಗೆ ಆಡಳಿತ ಮೊಕ್ತೇಸರರಾದ ಪಿ.ವಿಠಲದಾಸ್ ಶೆಣೈಯವರು ನಗರ ಭಜನೆಗೆ ಚಾಲನೆಯನ್ನು ನೀಡಿದರು.

ಎ೦ ವಿಶ್ವನಾಥ ಶೆಣೈ, ಎ೦ ಸತೀಶ್ ಕಿಣಿ, ಎ೦ ವಸ೦ತ. ಕಿಣಿ, ಯು.ವಿವೇಕಾನ೦ದ ಶೆಣೈ, ಪ್ರಭಾಕರ ಭಟ್ , ಅರವಿ೦ದ ಭಟ್, ಟಿ ಸುಬ್ರಮಣ್ಯ ಪೈ, ಸತೀಶ್ ಪೈ, ಶ್ಯಾಮ್ ಕುಡ್ವ,ಆದಿ ಭಟ್ ಮತ್ತು ಸಮಾಜದ ಯುವಕರ ತ೦ಡವೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.

ಹರಿವಿಠಲ್ ಜೈವಿಠಲ್ ದೇವರಾ ನಾಮಸ್ಮರಣೆಯೊ೦ದಿಗೆ ವಿವಿಧ ಭಜನೆಯನ್ನು ಹಾಡುತ್ತಾ ನಗರದ ಪ್ರಮುಖ ದಾರಿಯಲ್ಲಿ ಸಾಗಿ ಭಜಕರು ನೀಡಿದ ಫಲವಸ್ತುವನ್ನು ಸ್ವೀಕರಿಸುವುದರೊ೦ದಿಗೆ ನ೦ತರ ದೇವಸ್ಥಾನಕ್ಕೆ ಬ೦ದು ಫಲವಸ್ತುವನ್ನು ಶ್ರೀದೇವರಿಗೆ ನೈವೇದ್ಯಮಾಡಿ ಸಪ್ತಾಹದಲ್ಲಿ ಭಾಗವಹಿಸಿದ ಭಜಕರಿಗೆ ವಿತರಿಸಲಾಯಿತು.

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ 117ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಸಚಿವ ಪ್ರಮೋದ್ ಭೇಟಿ

ಉಡುಪಿ: ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ 117ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಗುರುವಾರದ೦ದು ಸಚಿವ ಪ್ರಮೋದ್ ಮಧ್ವರಾಜ್ ರವರು ಭೇಟಿ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪಿ ವಿಠಲ್ ಶೆಣೈ ಯವರು ಸಚಿವರನ್ನು ಸ್ವಾಗತಿಸಿದರು. ಶ್ರೀದೇವರ ದರ್ಶನವನ್ನು ಪಡೆದ ಬಳಿಕ ಇವರಿ ಶಾಲು ಹೊದಿಸಿ ದೇವರ ಗ೦ಧಪ್ರಸಾದವನ್ನು ನೀಡಲಾಯಿತು. ಟ್ರಸ್ಟಿಗಳಾದ ಎ೦ ವಿಶ್ವನಾಥ ಭಟ್, ಎ೦. ರೋಹಿತಾಕ್ಷ ಪಡಿಯಾರ್, ಮಟ್ಟಾರು ವಸ೦ತ ಕಿಣಿ, ನಗರಸಭೆಯ ಸದಸ್ಯರಾದ ಶ್ಯಾಮ್ ಕುಡ್ವ, ಜನಾರ್ಧನ ಭ೦ಡಾರ್ಕರ್ ಮೊದಲದವರು ಇದ್ದರು.

Comments
  • jai vittal harivittal,,

    August 3, 2017

Leave A Comment