Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ........ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

15 ಮಂದಿ ವಿಕೃತ ಕಾಮಿಗಳಿಂದ 16 ರ ಬಾಲಕನ ಮೇಲೆ ನಿರಂತರ ರೇಪ್‌ !

ಮುಂಬಯಿ: ಅತ್ಯಂತ ಹೇಯ ಮತ್ತು ನಿರ್ಲಜ್ಜ ಘಟನೆಯೊಂದರಲ್ಲಿ 16 ವರ್ಷ ಪ್ರಾಯದ ಬಾಲಕನ ಮೇಲೆ 15 ಮಂದಿ ವಿಕೃತ ತರುಣರು ವರ್ಷದ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಅಂಧೇರಿಯ ಪಶ್ಚಿಮ ಭಾಗದಲ್ಲಿ ಘಟನೆ ನಡೆದಿದ್ದು,ಡಿಎನ್‌ ನಗರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕ ತೀವ್ರ ನೋವಿನಿಂದ ಬಳಲುತ್ತಿದ್ದುದನ್ನು ಗಮನಿಸಿ ಸ್ನೇಹಿತ ಪೊಲೀಸರಿಗೆ ದೂರು ನೀಡಿದ್ದಾನೆ.

ಪೊಲೀಸರು ದೂರಿನನ್ವಯ 15 ಮಂದಿಯ ವಿರುದ್ಧ ಪೋಕ್ಸೋ ಕಾಯಿದೆ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳೆಲ್ಲರು 15 ರಿಂದ 17 ವರ್ಷದ ಒಳಗಿನವರಾಗಿದ್ದಾರೆ.

ಬಾಲಕನಿಗೆ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ಲೈಂಗಿಕ ದೌರ್ಜನ್ಯ ನಡೆದಿರುವುದು ಧೃಡಪಟ್ಟಿದೆ.

2016 ರಲ್ಲಿ ಮೊದಲ ಬಾರಿಗೆ ನೆರೆಮನೆಯ ಬಾಲಕ ಅಸಹಜ ಸೆಕ್ಸ್‌ ನಡೆಸಿ ವಿಡಿಯೋ ಚಿತ್ರಿಕರಿಸಿ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದ , ಆ ಬಳಿಕ ಹಲವು ಬಾರಿ ಸ್ನೇಹಿತರು ಅಸಹಜ ಸೆಕ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment