Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಇಡೀ ಅಮೆರಿಕವನ್ನು ಐಸಿಬಿಎಂ ಕ್ಷಿಪಣಿ ಉಡೀಸ್ ಮಾಡಬಲ್ಲದು: ಕಿಮ್ ಜಾಂಗ್ ಉನ್

ಪಯೊಂಗ್ ಯಾಂಗ್: ಉತ್ತರ ಕೊರಿಯಾ ಎರಡನೇ ಬಾರಿಗೆ ಅಂತರ ಖಂಡಾತರ ಕ್ಷಿಪಣಿ(ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್-ಐಸಿಬಿಎಂ) ಪ್ರಯೋಗ ಮಾಡಿದ್ದು ಈ ಕ್ಷಿಪಣಿ ಇಡೀ ಅಮೆರಿಕವನ್ನು ಧ್ವಂಸ ಮಾಡಬಲ್ಲದು ಎಂದು ಅಧ್ಯಕ್ಷ ಕಿಮ್ ಜಾಂಗ್ ಉನ್ ಹೇಳಿದ್ದಾರೆ.

ಉತ್ತರ ಕೊರಿಯದ ಐಸಿಬಿಎಂ ಅಸ್ತ್ರವು ಹೆಚ್ಚು ಸಾಮರ್ಥ್ಯ ಹೊಂದಿದ್ದು ಇದು ಚಿಕಾಗೋ ಮತ್ತು ಲಾಸ್ ಏಂಜಲಿಸ್ ಸೇರಿದಂತೆ ಅಮೆರಿಕದ ಪ್ರಮುಖ ನಗರಗಳನ್ನು ಒಂದೇ ಬಾರಿಗೆ ನುಚ್ಚುನೂರು ಮಾಡಬಲ್ಲದು ಎಂ ಕಿಮ್ ಜಾಂಗ್ ಅಮೆರಿಕಕ್ಕೆ ಬಹಿರಂಗ ಸವಾಲು ಹಾಕಿದ್ದಾನೆ.

ಐಸಿಬಿಎಂ ಕ್ಷಿಪಣಿಯ ಪ್ರಯೋಗದಿಂದ ನಮಗೆ ದೊಡ್ಡ ಸಮಾಧಾನವಾಗಿದೆ. ಈ ಕ್ಷಿಪಣಿ 3,725 ಕಿ.ಮೀ ಗರಿಷ್ಠ ಎತ್ತರ ಹಾಗೂ 998 ಕಿ.ಮೀ ನಿಖರ ಗುರಿಯತ್ತ ಚಲಿಸಿ ಜಪಾನಿನ ಸಮುದ್ರ ತೀರದಲ್ಲಿ ಇಳಿದಿದೆ.

ಅಮೆರಿಕ ಮತ್ತು ವಿಶ್ವಸಂಸ್ಥೆಯ ತೀವ್ರ ಆಕ್ಷೇಪವಿದ್ದರೂ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತೆ ಮತ್ತೆ ಕ್ಷಿಪಣಿಗಳ ಪರೀಕ್ಷೆ ನಡೆಸುತ್ತಿರುವುದು ಅಮೆರಿಕ ಅಧ್ಯಕ್ಷ ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಟ್ರಂಪ್ ಈ ಕ್ಷಿಪಣಿ ಪ್ರಯೋಗ ಮಾಡುವ ಮೂಲಕ ಉತ್ತರ ಕೊರಿಯಾ ಅತ್ಯಂತ ಅಪಾಯಕಾರಿ ಕೃತ್ಯವೆಸಗಿದೆ. ಈ ದುಸ್ಸಾಹಸದಿಂದ ಉತ್ತರ ಕೊರಿಯಾ ಅಂತಾರಾಷ್ಟ್ರೀಯ ಸಮುದಾಯದಿಂದ ಮತ್ತಷ್ಟು ದೂರವಾಗಲಿದೆ. ಪಯೊಂಗ್ ಯಾಂಗ್ ನ ಈ ಪ್ರಚೋದನಕಾರಿ ಕೃತ್ಯಕ್ಕೆ ಮುಂದೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ.

No Comments

Leave A Comment