Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ರಾಜ್ಯಸಭೆ ಚುನಾವಣೆ; ಶಾ 34 ಕೋಟಿ, ಬಲ್ ವಂತ್ 316 ಕೋಟಿ ಆಸ್ತಿಯ ಒಡೆಯ!

ಅಹ್ಮದಾಬಾದ್: ಗುಜರಾತ್ ನಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿರುವ ಮೂರು ಪ್ರಮುಖ ಅಭ್ಯರ್ಥಿಗಳ ಆಸ್ತಿ, ಪಾಸ್ತಿಯಲ್ಲಿ ಗಣನೀಯ ಏರಿಕೆಯಾಗಿದೆ. ಬಿಜೆಪಿಯ ಅಭ್ಯರ್ಥಿಗಳಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಬಲ್ ವಂತ್ ಸಿಂಹ ರಜಪೂತ್ ಅವರ ಆಸ್ತಿ, ಪಾಸ್ತಿಯಲ್ಲಿ ಏರಿಕೆಯಾಗಿರುವುದು ಅಫಿಡವಿಟ್ ನಲ್ಲಿ ಬಯಲಾಗಿದೆ.

ಗುಜರಾತ್ ನಿಂದ ರಾಜ್ಯಸಭೆಗೆ ಸ್ಪರ್ಧಿಸಿರುವ ಅಮಿತ್ ಶಾ, ಸ್ಮೃತಿ ಇರಾನಿ ಹಾಗೂ ಬಲ್ ವಂತ್ ಸಿಂಗ್ ರಜಪೂತ್ ಶುಕ್ರವಾರ ನಾಮಪತ್ರ ಸಲ್ಲಿಸಿದ್ದರು. ಆಗಸ್ಟ್ 8ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದೆ.

316 ಕೋಟಿ ರೂಪಾಯಿ ಒಡೆಯ ಬಲ್ ವಂತ್ ಸಿಂಹ!
ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಬಲ್ ವಂತ್ ಸಿಂಗ್ ಒಂದು ವೇಳೆ ರಾಜ್ಯಸಭೆಗೆ ಆಯ್ಕೆಗೊಂಡರೆ ಗುಜರಾತ್ ನಿಂದ ಆಯ್ಕೆಯಾದ ಅತೀ ಶ್ರೀಮಂತ ಸದಸ್ಯರಾಗಲಿದ್ದಾರೆ.

2012ರಲ್ಲಿ ಬಲ್ ವಂತ್ ಸಿಂಗ್ ಒಟ್ಟು 263 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಹೊಂದಿದ್ದರು. 2017ರಲ್ಲಿ ಅದು 317 ಕೋಟಿಗೆ ಏರಿಕೆಯಾಗಿದೆ.

ಸ್ಮೃತಿ ಇರಾನಿ ಆಸ್ತಿ ಏರಿಕೆ, ಡಿಗ್ರಿ ಅನುತ್ತೀರ್ಣ:
ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಆದಾಯ 2014ಕ್ಕಿಂತ ಅಧಿಕವಾಗಿದೆ. 2014ರಲ್ಲಿ ಇರಾನಿ ಅವರ ಚರ ಸಂಪತ್ತು 4.91 ಕೋಟಿ ಇದ್ದಿದ್ದು, 2017ರಲ್ಲಿ 8.88 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಷ್ಟೇ ಅಲ್ಲ ಈ ಬಾರಿ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ಬ್ಯಾಚುಲರ್ ಆಫ್ ಕಾಮರ್ಸ್ ಪದವಿ ಪೂರ್ಣಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
2014ರಲ್ಲಿ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ 1994ರಲ್ಲಿ ದೆಹಲಿ ಯೂನಿರ್ವಸಿಟಿಯ ಕರೆಸ್ಪಾಂಡೆನ್ಸ್ ಸ್ಕೂಲ್ ನಲ್ಲಿ ಬಿ ಕಾಂ ಪದವಿ ಪಡೆದಿರುವುದಾಗಿ ಉಲ್ಲೇಖಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ನಡೆದಿತ್ತು. ಇದೀಗ 2017ರ ರಾಜ್ಯಸಭಾ ಚುನಾವಣೆಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಮೂರು ವರ್ಷದ ಡಿಗ್ರಿ ಕೋರ್ಸ್ ಪೂರ್ಣವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಮಿತ್ ಶಾ ಆಸ್ತಿಯೂ ಶೇ.300ರಷ್ಟು ಹೆಚ್ಚಳ!
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚರಾಸ್ತಿಯ  ಮೌಲ್ಯ 1.90 ಕೋಟಿ ರೂಪಾಯಿಯಿಂದ 19 ಕೋಟಿ ರೂಪಾಯಿಗೆ ಏರಿಕೆಯಾಗಿದೆ. 2017ರ ಅಫಿಡವಿಟ್ ನಲ್ಲಿ ತನ್ನ ಪೂರ್ವಜರಿಂದ ಬಂದ ಚರಾಸ್ತಿಯ ಮೌಲ್ಯ 10.38 ಕೋಟಿ ರೂಪಾಯಿ ಎಂದು ಉಲ್ಲೇಖಿಸಿದ್ದಾರೆ.

ಅಮಿತ್ ಶಾ ಹಾಗೂ ಪತ್ನಿಯ ಚರಾಸ್ತಿ ಮತ್ತು ಸ್ಥಿರಾಸ್ತಿ 2012ಕ್ಕಿಂತ ಶೇ.300ರಷ್ಟು ಅಧಿಕವಾಗಿದೆ. 2012ರಲ್ಲಿ ಶಾ ಮತ್ತು ಪತ್ನಿಯ ಚರ ಮತ್ತು ಸ್ಥಿರಾಸ್ತಿಯ ಮೌಲ್ಯ 8.54 ಕೋಟಿ ಇದ್ದಿದ್ದು, 2017ರಲ್ಲಿ 34.31 ಕೋಟಿ ರೂಪಾಯಿಗೆ ಏರಿಕೆಯಾಗಿದೆ.

ಅಹ್ಮದ್ ಪಟೇಲ್ ಆಸ್ತಿಯೂ ಡಬಲ್!
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ಗುಜರಾತ್ ನಿಂದ ದೀರ್ಘಾವಧಿ ವರೆಗೆ ರಾಜ್ಯಸಭೆಯನ್ನು ಪ್ರತಿನಿಧಿಸಿದ್ದ ಅಹ್ಮದ್ ಪಟೇಲ್ ಅವರ ವಾರ್ಷಿಕ ಆದಾಯ 15, 10, 147 ರೂಪಾಯಿ. ಪಟೇಲ್ ಪತ್ನಿಯ ವಾರ್ಷಿಕ ಆದಾಯ 20, 15, 900 ರೂಪಾಯಿ(35, 26, 047) ಆಗಿದೆ. 2011ರಲ್ಲಿ ಅಹ್ಮದ್ ಪಟೇಲ್ ಹಾಗೂ ಪತ್ನಿಯ ಚರ ಮತ್ತು ಸ್ಥಿರಾಸ್ತಿಯ ಮೌಲ್ಯ ಶೇ.123ರಷ್ಟು ಏರಿಕೆಯಾಗಿದೆ.

No Comments

Leave A Comment